Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ನಾಗ್ಪುರ: ಇಬ್ಬರು ಗಂಡಂದಿರನ್ನು ಹೊಂದಿದ್ದ ಮಹಿಳೆ ಈಗ ಮೂರನೆಯವನ ಜೊತೆ ಓಡಿ ಹೋಗಿದ್ದಾಳೆ.ಈ ಬಗ್ಗೆ ಇದೀಗ ಇಬ್ಬರು ಗಂಡಂದಿರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಇಬ್ಬರು ವ್ಯಕ್ತಿಗಳು ಬಂದು ತನ್ನ ಹೆಂಡತಿ ನಾಪತ್ತೆಯಾಗಿರುವುದಾಗಿ ಒಬ್ಬಳೇ ಮಹಿಳೆ ಬಗ್ಗೆ ದೂರು ನೀಡಿದಾಗ ಪೊಲೀಸರಿಗೆ ಶಾಕ್ ಆಗಿತ್ತು.
ನಾಲ್ಕು ವರ್ಷದ ಹಿಂದೆ ಮಹಿಳೆಗೆ ಮೊದಲ ಮದುವೆಯಾಗಿ ಎರಡು ಮಕ್ಕಳಾಗಿತ್ತು. ಈ ನಡುವೆ ಮೊಬೈಲ್ ಗೆ ಬಂದ ಮಿಸ್ ಕಾಲ್ ನಿಂದಾಗಿ ಎರಡನೆಯವನ ಪರಿಚಯವಾಗಿತ್ತು. ಬಳಿಕ ಮಹಿಳೆ ಮೊದಲ ಗಂಡನನ್ನು ಬಿಟ್ಟು ಎರಡನೆಯವನನ್ನು ಮದುವೆಯಾಗಿದ್ದಳು.
ಇತ್ತೀಚೆಗೆ ಸೋಷಿಯಲ್ ಮೀಡಿಯಾ ಮುಖಾಂತರ ಮೂರನೆಯವನ ಪರಿಚಯವಾಗಿತ್ತು. ಹೀಗಾಗಿ ಊರಿಗೆ ಹೋಗಿ ಬರುತ್ತೇನೆಂದು ಮನೆ ಬಿಟ್ಟಿದ್ದ ಮಹಿಳೆ ಮೂರನೆಯ ಪ್ರೇಮಿ ಜೊತೆ ಪರಾರಿಯಾಗಿದ್ದಳು. ಹೀಗಾಗಿ ಈಗ ಇಬ್ಬರೂ ಗಂಡಂದಿರು ಪತ್ನಿ ಕಾಣೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ನಡುವೆ ಮೊದಲ ಗಂಡನಿಗೆ ಮಹಿಳೆ ಜೊತೆ ಬದುಕುವ ಆಸೆಯಿಲ್ಲ. ಆದರೆ ಎರಡನೇ ಗಂಡನಿಗೆ ಪತ್ನಿಯನ್ನು ಮರಳಿ ಪಡೆಯುವ ಉದ್ದೇಶವಿದೆ. ಈ ಕಾರಣಕ್ಕೆ ಮೊದಲ ಗಂಡನ ಮನ ಒಲಿಸಿ ಇಬ್ಬರೂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದೀಗ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.