Webdunia - Bharat's app for daily news and videos

Install App

ಝಡ್‌ ಶ್ರೇಣಿ ಭದ್ರತೆ: ತಂದೆಗೆ ಏನಾದ್ರೂ ಆದ್ರೆ ಪ್ರಧಾನಿ ಮೋದಿ ಚರ್ಮ ಸುಲಿಯುತ್ತೇವೆ ಎಂದು ಲಾಲು ಪುತ್ರ

Webdunia
ಸೋಮವಾರ, 27 ನವೆಂಬರ್ 2017 (16:20 IST)
ಕೇಂದ್ರ ಗೃಹಸಚಿವಾಲಯ ಬಿಹಾರ್ ಮಾಜಿ ಸಿಎಂ, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಝಡ್‌ ಶ್ರೇಣಿ ಭದ್ರತೆಯನ್ನು ಹಿಂಪಡೆದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಲಾಲು ಪುತ್ರ ತೇಜ್ ಪ್ರತಾಪ್, ತಂದೆಗೇನಾದ್ರೂ ಅನಾಹುತವಾದಲ್ಲಿ ಪ್ರಧಾನಿ ಮೋದಿಯ ಚರ್ಮ ಸುಲಿಯುತ್ತೇವೆ ಎಂದು ಗುಡುಗಿದ್ದಾರೆ.  
ಮಾಜಿ ಮುಖ್ಯಮಂತ್ರಿ ಲಾಲು ಯಾದವ್ ಅವರಿಗೆ ನೀಡಲಾಗಿದ್ದ ಎನ್‌ಎಸ್‌ಜಿ ಭದ್ರತೆಯನ್ನು ಹಿಂಪಡೆಯಲಾಗಿದ್ದು, ಸಿಆರ್‌ಪಿಎಫ್‌ ಪಡೆ ಅವರಿಗೆ ಭದ್ರತೆಯನ್ನು ಒದಗಿಸುತ್ತದೆ ಎಂದು ಮೂಲಗಳು ತಿಳಿಸಿವೆ.
 
ಕೇಂದ್ರದ ಗೃಹ ಸಚಿವಾಲಯ ವಿಐಪಿಗಳ ಭದ್ರತೆಯನ್ನು ಪುನರ್ ಪರಿಶೀಲನೆ ನಡೆಸಿದ್ದು, ಕೆಲವರಿಗೆ ನೀಡಲಾದ ಝಡ್‌ ಶ್ರೇಣಿ ಭದ್ರತೆಯನ್ನು ಹಿಂಪಡೆದಿದೆ. ಅಗತ್ಯಕ್ಕೆ ತಕ್ಕಂತೆ ಮಾರ್ಪಾಡು ಮಾಡಲಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. 
 
ಎನ್‌ಎಸ್‌ಜಿ ಭದ್ರತೆಯನ್ನು ಹಿಂಪಡೆದಿರುವ ಬಗ್ಗೆ ಖಡಕ್ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ತೇಜ್ ಪ್ರತಾಪ್, ತಂದೆಗೆ ಅನಾಹುತವಾದಲ್ಲಿ ಪ್ರಧಾನಿ ಮೋದಿಯವರ ಚರ್ಮ ಸುಲಿಯುತ್ತೇವೆ. ನಮ್ಮ ತಂದೆಯನ್ನು ಹತ್ಯೆ ಮಾಡಲು ಇದೊಂದು ಕೇಂದ್ರ ಸರಕಾರದ ಸಂಚು ಎಂದು ಕಿಡಿಕಾರಿದ್ದಾರೆ.  
 
ತೇಜ್ ಪ್ರತಾಪ್ ಹೇಳಿಕೆಗೆ ಪ್ರತ್ಯುತ್ತರ ನೀಡಿರುವ ಬಿಜೆಪಿ ಮುಖಂಡ ಸುಶೀಲ್ ಮೋದಿ, ಲಾಲು ಯಾದವ್‌ಗೆ ತೊಂದರೆಯಾದಲ್ಲಿ ಕೇಂದ್ರ ಮತ್ತಪ ರಾಜ್ಯ ಸರಕಾರ ಹೊಣೆ ಎನ್ನುವುದು ತಪ್ಪು. ಘಟನೆಗಳು ನಡೆಯುತ್ತಿರುತ್ತವೆ. ಮಾಜಿ ಪ್ರದಾನಿ ಇಂದಿರಾಗಾಂಧಿಗೆ ಭಾರಿ ಭದ್ರತೆಯಿದ್ದರೂ ಹತ್ಯೆಯಾಗಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
 
ಬಿಹಾರ್ ಮಾಜಿ ಸಿಎಂ ಜಿತಿನ್ ರಾಮ್ ಮಾಂಜಿ ಎನ್‌ಎಸ್‌ಜಿ ಭದ್ರತೆಯನ್ನು ಹಿಂಪಡೆಯಲಾಗಿದ್ದು, ಸ್ಥಳೀಯ ಪೊಲೀಸರು ಭದ್ರತೆಯನ್ನು ನೀಡಲಿದ್ದಾರೆ.  
 
ಭಧ್ರತೆಯನ್ನು ಹಿಂಪಡೆಯುವ ಕೇಂದ್ರ ಸರಕಾರದ ನಿರ್ಧಾರವನ್ನು ಟೀಕಿಸಿರುವ ಮಾಂಜಿ, ನಾನು ನಕ್ಸಲ್ ಪೀಡಿತ ಪ್ರದೇಶದವನಾಗಿದ್ದರಿಂದ ನನ್ನ ಜೀವಕ್ಕೆ ಬೆದರಿಕೆಯಿದೆ. ಒಂದು ವೇಳೆ ನನ್ನ ಜೀವಕ್ಕೆ ಅಪಾಯವಾದಲ್ಲಿ ಕೇಂದ್ರ ಮತ್ತು ನಿತೀಶ್ ಕುಮಾರ್ ಸರಕಾರವೇ ನೇರ ಹೊಣೆ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments