Publish Date: Sat, 24 Jul 2021 (11:38 IST)
Updated Date: Sat, 24 Jul 2021 (09:57 IST)
ಅಹಮ್ಮದಾಬಾದ್: ನಿರುದ್ಯೋಗಿ ಪತಿ ತನ್ನ ಹಣವನ್ನೆಲ್ಲಾ ಖರ್ಚು ಮಾಡುತ್ತಿದ್ದುದರಿಂದ ಬೇಸತ್ತ ಪತ್ನಿ ಗೆಳೆಯನ ಸಹಾಯದಿಂದ ಆತನ ಜೀವ ತೆಗೆದ ಘಟನೆ ಗುಜರಾತ್ ನಲ್ಲಿ ನಡೆದಿದೆ.
ಪತಿಗೆ ಉದ್ಯೋಗವಿರಲಿಲ್ಲ. ಆರೋಪಿ ಪತ್ನಿ ಚಿಂದಿ ಆಯ್ದು ಸಂಪಾದನೆ ಮಾಡುತ್ತಿದ್ದಳು. ಪತಿ, ಪತ್ನಿ ದುಡಿದು ತರುತ್ತಿದ್ದ ಹಣವನ್ನೆಲ್ಲಾ ಖರ್ಚು ಮಾಡುತ್ತಿದ್ದ. ಇದು ಪತ್ನಿಯ ಬೇಸರಕ್ಕೆ ಕಾರಣವಾಗಿತ್ತು.
ಈ ಕಾರಣಕ್ಕೆ 19 ವರ್ಷದ ಗೆಳೆಯ ಮತ್ತು ಆತನ ಸಹಚರರ ನೆರವಿನೊಂದಿಗೆ ಚೆನ್ನಾಗಿ ಪತಿಯ ಮೇಲೆ ಹಲ್ಲೆ ನಡೆಸಿ, ಹತ್ಯೆ ಮಾಡಿದ್ದಾರೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ. ಇದೀಗ ಪೊಲೀಸರು ಆರೋಪಿ ಪತ್ನಿ ಹಾಗೂ ಆಕೆಯ ಸಹಚರರನ್ನು ಬಂಧಿಸಿದ್ದಾರೆ.