ಗುಜರಾತ್: ಪೋಷಕರು ವಿವಾಹಕ್ಕೆ ನಿರಾಕರಿಸಿದರೆಂಬ ಕಾರಣಕ್ಕೆ ನವ ಜೋಡಿಯೊಂದು ನೇಣಿಗೆ ಶರಣಾದ ಘಟನೆ ಗುಜರಾತ್ ನಲ್ಲಿ ನಡೆದಿದೆ.
ನೆರೆಮನೆಯವರಾಗಿದ್ದ ಈ ಇಬ್ಬರೂ ಪ್ರೇಮಿಗಳು ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಇಬ್ಬರೂ ಒಂದೇ ಜಾತಿಯಾಗಿದ್ದರೂ ಪೊಷಕರು ವಿವಾಹಕ್ಕೆ ಒಪ್ಪಿಗೆ ನೀಡಿರಲಿಲ್ಲ.
ಬದಲಾಗಿ ಯುವತಿಗೆ ಮತ್ತೊಬ್ಬ ಯುವಕನ ಜೊತೆ ವಿವಾಹ ನಿಶ್ಚಯಿಸಿದ್ದರು. ಇದರಿಂದ ಮನನೊಂದ ಜೋಡಿ ಜೀವ ಆತ್ಮಹತ್ಯೆಗೆ ಶರಣಾಗಿದೆ. ಅತ್ತ ಪೋಷಕರ ವಿರುದ್ಧವೂ ಹೋಗಲಾರದೇ ಇತ್ತ ಸಮಾಜವನ್ನೂ ಎದುರಿಸಲಾಗದೇ ಪ್ರೇಮಿಗಳು ಈ ಧಾರುಣ ನಿರ್ಧಾರಕ್ಕೆ ಬಂದಿದ್ದರು. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.