Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

‘ನಮ್ಮ ಕತ್ತನ್ನು ಸೀಳಿದರೂ ಕೂಡ ನಾವು ಮುಸ್ಲಿಮರಾಗಿಯೇ ಇರುತ್ತೇವೆ ಎಂದು ಓವೈಸಿ ಹೇಳಿದ್ಯಾಕೆ?

‘ನಮ್ಮ ಕತ್ತನ್ನು ಸೀಳಿದರೂ ಕೂಡ ನಾವು ಮುಸ್ಲಿಮರಾಗಿಯೇ ಇರುತ್ತೇವೆ ಎಂದು ಓವೈಸಿ ಹೇಳಿದ್ಯಾಕೆ?
ನವದೆಹಲಿ , ಸೋಮವಾರ, 6 ಆಗಸ್ಟ್ 2018 (13:44 IST)
ನವದೆಹಲಿ : ಹರಿಯಾಣದಲ್ಲಿ ಮುಸ್ಲಿಮ್‌ ವ್ಯಕ್ತಿಯೊಬ್ಬನ ಗಡ್ಡವನ್ನು ಬಲವಂತದಿಂದ ಬೋಳಿಸಲಾಯಿತು ಎಂಬ ಪ್ರಕರಣದ ಕುರಿತಾಗಿ ಓವೈಸಿ ಆಕ್ರೋಶಗೊಂಡಿದ್ದಾರೆ.


'ನೀವು ನಮ್ಮ ಕತ್ತನ್ನು ಸೀಳಿದರೂ ನಾವು ಮುಸ್ಲಿಮರಾಗಿಯೇ ಇರುತ್ತೇವೆ' ಎಂದು ಎಐಎಂಐಎಂ ಪಕ್ಷದ ಮುಖ್ಯಸ್ಥರಾಗಿರುವ ಸಂಸದ ಅಸಾದುದ್ದೀನ್‌ ಓವೈಸಿ ಹೇಳಿದ್ದಾರೆ.

‘ಮುಸ್ಲಿಂ ವ್ಯಕ್ತಿಯೊಬ್ಬನ ಗಡ್ಡವನ್ನು ಬಲವಂತದಿಂದ ಬೋಳಿಸಲಾಯಿತೆಂದು ನಾವು ಕೇಳಿದ್ದೇವೆ. ಈ ಕೃತ್ಯ ಮಾಡಿದವರಿಗೆ ಮತ್ತು ಅವರ ಅಪ್ಪಂದಿರಿಗೆ ನಾನು ಎಚ್ಚರಿಕೆ ನೀಡುವುದೇನೆಂದರೆ ನೀವು ನಮ್ಮ ಕತ್ತನ್ನು ಸೀಳಿದರೂ ಕೂಡ ನಾವು ಮುಸ್ಲಿಮರಾಗಿಯೇ ಇರುತ್ತೇವೆ. ನಾವು ನಿಮ್ಮನ್ನು ಇಸ್ಲಾಮ್‌ ಗೆ ಮತಾಂತರಿಸುತ್ತೇವೆ ಮತ್ತು ನೀವು ಗಡ್ಡ ಬಿಡುವಂತೆ ಮಾಡುತ್ತೇವೆ'' ಎಂದು ಓವೈಸಿ ಗುಡುಗಿದ್ದಾರೆ.


ಗುರುಗ್ರಾಮದಲ್ಲಿ ಯೂನುಸ್‌ ಎಂಬ ಮುಸ್ಲಿಮ್‌ ಯುವಕನಿಗೂ, ಅಪರಿಚಿತರಿಬ್ಬರಿಗೂ ಜಗಳವಾಗಿತ್ತಂತೆ. ಜಗಳ ತಾರಕಕ್ಕೇರಿ ಅಪರಿಚಿತ ದುಷ್ಕರ್ಮಿಗಳು ಮುಸ್ಲಿಂ ಯುವಕನ ಗಡ್ಡವನ್ನು ಬಲವಂತದಿಂದ ಬೋಳಿಸಿದದ್ದಾರೆ ಎಂದು ಘಟನೆ ವರದಿಯಾಗಿತ್ತು.
ನೊಂದ ಮುಸ್ಲಿಂ ವ್ಯಕ್ತಿ  ಗುರುಗ್ರಾಮ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಿಸಿದ್ದರು. 


Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳ ಅಶ್ಲೀಲ ಚಿತ್ರ ಇಟ್ಟುಕೊಂಡಿದ್ದಕ್ಕೆ ಅಮೆರಿಕಾದಲ್ಲಿ ಜೈಲು ಪಾಲಾದ ಭಾರತೀಯ ಯುವಕ