ನ್ಯೂಯಾರ್ಕ್ : ಮಕ್ಕಳ ಅಶ್ಲೀಲ ಚಿತ್ರಗಳನ್ನು ಹೊಂದಿರುವ ಕಾರಣಕ್ಕಾಗಿ ಭಾರತೀಯ ಯುವಕನೊಬ್ಬನಿಗೆ ಅಮೆರಿಕಾದಲ್ಲಿ ಜೈಲು ಶಿಕ್ಷೆ ವಿಧಿಸಲಾಗಿದೆ.
ಅಮೆರಿಕದಲ್ಲಿ 18 ವರ್ಷಗಳಿಗಿಂತ ಕೆಳಗಿನ ಪ್ರಾಯದವರನ್ನು ಲೈಂಗಿಕ ಚಿತ್ರಗಳಲ್ಲಿ ಬಳಸಿಕೊಳ್ಳುವುದು ಮತ್ತು ಆ ಚಿತ್ರಗಳನ್ನು ಇಟ್ಟುಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಆದರೆ ಭಾರತ ಮೂಲದ ಅಭಿಜತ್ ದಾಸ್(28) ಎಂಬಾತ ಮಕ್ಕಳ ಅಶ್ಲೀಲ ಚಿತ್ರಗಳನ್ನು ಸಂಗ್ರಹಿಸಿಕೊಂಡಿದ್ದ. ಇತನ ಬಳಿ ಮಕ್ಕಳ ಅಶ್ಲೀಲ ಚಿತ್ರಗಳಿರುವ 1000 ಪೋಟೋಗಳು ಹಾಗೂ 380 ವಿಡಿಯೋಗಳು ಪತ್ತೆಯಾಗಿದ್ದವು.
ಆದಕಾರಣ ಆತ ನಾಲ್ಕು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. ಈತನಿಗೆ ಅಮೆರಿಕಾದ ಫೆಡರಲ್ ಕೋರ್ಟ್ 52 ತಿಂಗಳ ಜೈಲುಶಿಕ್ಷೆ ವಿಧಿಸಿದೆ ಎಂದು ಯುಎಸ್ ಅಟಾರ್ನಿ ಸ್ಕಾಟ್ ಬ್ರಾಡ್ಲಿ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ