Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಕಲಿ ಕೋವಿಶೀಲ್ಡ್ ಲಸಿಕೆ ಕುರಿತು ಎಚ್ಚರಿಕೆ ರವಾನಿಸಿದ WHO

ನಕಲಿ ಕೋವಿಶೀಲ್ಡ್ ಲಸಿಕೆ ಕುರಿತು ಎಚ್ಚರಿಕೆ ರವಾನಿಸಿದ WHO
ನವದೆಹಲಿ , ಬುಧವಾರ, 18 ಆಗಸ್ಟ್ 2021 (08:54 IST)
ನವದೆಹಲಿ, ಆಗಸ್ಟ್ 18: ಕೆಲವು ದೇಶಗಳಲ್ಲಿ ನಕಲಿ ಕೋವಿಶೀಲ್ಡ್ ಲಸಿಕೆಗಳು ಪತ್ತೆಯಾಗಿದ್ದು, ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಮಂಗಳವಾರ ಎಚ್ಚರಿಕೆ ರವಾನಿಸಿದೆ. WHO ಪ್ರಕಾರ, ರೋಗಿಯ ಮಟ್ಟದಲ್ಲಿ ನೀಡಲಾದ ಕೆಲವು ಕೋವಿಶೀಲ್ಡ್ ಲಸಿಕೆಗಳು ನಕಲಿ ಎಂಬುದನ್ನು ಸೆರಂ ಇನ್ಸ್ಟಿಟ್ಯೂಟ್ ದೃಢಪಡಿಸಿದೆ.

ಭಾರತದಲ್ಲಿ ರೋಗಿಗಳಿಗೆ ನೀಡಲಾಗುತ್ತಿರುವ ಕೋವಿಶೀಲ್ಡ್ ಲಸಿಕೆಯ ನೈಜತೆ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿದ್ದು, ಆಕ್ಸ್ಫರ್ಡ್ ಆಸ್ಟ್ರಾಜೆನೆಕಾ ಹಾಗೂ ಭಾರತದ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಒಟ್ಟಾಗಿ ಕೋವಿಶೀಲ್ಡ್ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದವು. ಕೋವಿಶೀಲ್ಡ್ನ ನಕಲಿ ಲಸಿಕೆಯು ಕೆಲವು ಕಡೆ ಸರಬರಾಜಾಗಿರುವುದಾಗಿ ತಿಳಿದುಬಂದಿದೆ.
ಪಾರದರ್ಶಕ ಖರೀದಿ ಮತ್ತು ಪೂರೈಕೆ ವ್ಯವಸ್ಥೆಗಳ ಮೂಲಕ ಉತ್ತಮ ಹಾಗೂ ನೈಜ ಕೊರೊನಾ ಲಸಿಕೆಗಳನ್ನು ಒದಗಿಸಲು ತಂತ್ರಜ್ಞಾನ ಬೆಂಬಲಿತ ಕೋವಿನ್ ಪ್ಲಾಟ್ಫಾರ್ಮ್ ಬಳಸಿಕೊಳ್ಳುವ ಕೇಂದ್ರ ಸರ್ಕಾರದ ಪ್ರಯತ್ನಗಳ ಹೊರತಾಗಿಯೂ ವಿಶ್ವ ಆರೋಗ್ಯ ಸಂಸ್ಥೆ ಕಣ್ಗಾವಲು, ಗುಣಮಟ್ಟ ಹಾಗೂ ನಕಲಿ ವೈದ್ಯಕೀಯ ಉತ್ಪನ್ನಗಳ ಮೇಲ್ವಿಚಾರಣಾ ವ್ಯವಸ್ಥೆ ಭಾರತ ಹಾಗೂ ಉಗಾಂಡಾ ದೇಶಗಳಲ್ಲಿ ಕೋವಿಶೀಲ್ಡ್ ನಕಲಿ ಲಸಿಕೆ ಪೂರೈಕೆಯಾಗಿರುವುದನ್ನು ಗುರುತಿಸಿದೆ.
ವಿಶ್ವ ಆರೋಗ್ಯ ಸಂಸ್ಥೆ ಮಂಗಳವಾರ ಆಗ್ನೇಯ ಏಷ್ಯಾ ಹಾಗೂ ಆಫ್ರಿಕಾದಲ್ಲಿ ನಕಲಿ ಕೋವಿಶೀಲ್ಡ್ ಲಸಿಕೆ ಸಂಬಂಧ ವೈದ್ಯಕೀಯ ಉತ್ಪನ್ನ ಎಚ್ಚರಿಕೆ ನೀಡಿದೆ. ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ ನಕಲಿ ಉತ್ಪನ್ನಗಳು ಪೂರೈಕೆಯಾಗಿರುವುದರ ಕುರಿತು ಜಾಗತಿಕ ಸಾರ್ವಜನಿಕ ಆರೋಗ್ಯ ಸಂಸ್ಥೆ ಉಲ್ಲೇಖಿಸಿದೆ.
WHO ಪ್ರಕಾರ, ರೋಗಿ ಮಟ್ಟದಲ್ಲಿ ನೀಡಲಾದ ಕೆಲವು ಕೋವಿಶೀಲ್ಡ್ ಕೊರೊನಾ ಲಸಿಕೆ ಬಾಟಲಿಗಳು ನಕಲಿ ಎಂಬುದನ್ನು ಲಸಿಕೆ ಅಭಿವೃದ್ಧಿ ಮಾಡಿದ ಭಾರತದ ಸೆರಂ ಇನ್ಸ್ಟಿಟ್ಯೂಟ್ ದೃಢಪಡಿಸಿದೆ.
ಆಸ್ಪತ್ರೆಗಳು, ಚಿಕಿತ್ಸಾಲಯಗಳು, ಆರೋಗ್ಯ ಕೇಂದ್ರಗಳು, ಸಗಟು ವ್ಯಾಪಾರಿಗಳು, ವಿತರಕರು, ಔಷಧಾಲಯಗಳು ಮತ್ತು ವೈದ್ಯಕೀಯ ಉತ್ಪನ್ನಗಳ ಇತೆರೆ ಪೂರೈಕೆದಾರರ ಮೇಲೆ ಕಣ್ಗಾವಲು ಹೆಚ್ಚಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಭಾರತಕ್ಕೆ ಸೂಚನೆ ನೀಡಿದೆ. ಈ ಲಸಿಕೆ ಪೂರೈಕೆಯಾಗುತ್ತಿರುವ ದೇಶಗಳಲ್ಲಿ ಹೆಚ್ಚಿನ ಜಾಗರೂಕತೆ ವಹಿಸುವಂತೆಯೂ ಎಚ್ಚರಿಕೆ ನೀಡಿದೆ. ಈ ನಕಲಿ ಉತ್ಪನ್ನಗಳು ಜಾಗತಿಕ ಪೂರೈಕೆ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದೆ.
ಉದ್ದೇಶಪೂರ್ವಕವಾಗಿ ಕೆಲವು ಲಸಿಕೆಗಳನ್ನು ನಕಲಿಯಾಗಿ ಪೂರೈಸಲಾಗಿದೆ. ಈ ಉತ್ಪನ್ನಗಳು ಸುಳ್ಳು ಉತ್ಪನ್ನಗಳು ಎಂಬುದನ್ನು ದೃಢೀಕರಿಸಲಾಗಿದೆ.
ಕೋವಿಶೀಲ್ಡ್-ಕೋವ್ಯಾಕ್ಸಿನ್ ಮಿಶ್ರಿತ ಲಸಿಕೆ ಪ್ರಯೋಗಕ್ಕೆ ಅನುಮತಿ
ಭಾರತದಲ್ಲಿ ಎರಡು ಎಂಎಲ್ ಕೋವಿಶೀಲ್ಡ್ ಲಸಿಕೆಯ ಉತ್ಪಾದನೆ ನಕಲಿ ಎಂದು ಗುರುತಿಸಲಾಗಿದೆ. ಸೆರಂ ಇನ್ಸ್ಟಿಟ್ಯೂಟ್, ಎರಡು ಎಂಎಲ್ (ನಾಲ್ಕು ಡೋಸ್) ಲಸಿಕೆಯನ್ನು ಉತ್ಪಾದಿಸುತ್ತಿಲ್ಲ. ಉಗಾಂಡಾದಲ್ಲಿ 4121Z040 ಬ್ಯಾಚ್ ಲಸಿಕೆಯನ್ನು ನಕಲಿ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಕೊರೊನಾ ಸೋಂಕಿನ ವಿರುದ್ಧ ಹೋರಾಟಕ್ಕೆ 18 ವರ್ಷ ಮೇಲ್ಪಟ್ಟವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಈ ಕೋವಿಶೀಲ್ಡ್ ಲಸಿಕೆಯನ್ನು ಸೂಚಿಸಲಾಗಿದೆ. ಕೋವಿಡ್ ಲಸಿಕೆ ಬಳಕೆಯು ರಾಷ್ಟ್ರೀಯ ನಿಯಂತ್ರಣ ಪ್ರಾಧಿಕಾರಗಳ ಅಧೀಕೃತ ಮಾರ್ಗದರ್ಶನಕ್ಕೆ ಅನುಗುಣವಾಗಿರಬೇಕು ಎಂದು ಡಬ್ಲುಎಚ್ಒ ತಿಳಿಸಿದೆ.
ನಕಲಿ ಕೋವಿಶೀಲ್ಡ್ ಲಸಿಕೆಗಳು ಜಾಗತಿಕ ಮಟ್ಟದಲ್ಲಿ ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಅಪಾಯವನ್ನುಂಟುಮಾಡುತ್ತವೆ. ಇದು ಆರೋಗ್ಯ ವ್ಯವಸ್ಥೆ ಮೇಲೆ ಹೆಚ್ಚಿನ ಹೊರೆಯನ್ನೂ ನೀಡಲಿವೆ. ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ತಡೆಯಲು ಈ ನಕಲಿ ಉತ್ಪನ್ನಗಳ ಚಲಾವಣೆ ಪತ್ತೆ ಹಚ್ಚುವುದು ಅತಿ ಮುಖ್ಯ ಕೆಲಸ ಎಂದು ಉಲ್ಲೇಖಿಸಿದೆ.
ಭಾರತದಲ್ಲಿ ಸದ್ಯಕ್ಕೆ ಮೂರು ಕೊರೊನಾ ಲಸಿಕೆಗಳಿಗೆ ಅನುಮೋದನೆ ದೊರೆತಿದೆ. ಕೋವ್ಯಾಕ್ಸಿನ್, ಕೋವಿಶೀಲ್ಡ್ ಹಾಗೂ ಸ್ಪುಟ್ನಿಕ್ ವಿ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದೆ. ಕೋವಿಶೀಲ್ಡ್ ಲಸಿಕೆಯನ್ನು ಭಾರತದ ಸೆರಂ ಇನ್ಸ್ಟಿಟ್ಯೂಟ್ ಉತ್ಪಾದನೆ ಮಾಡುತ್ತಿದೆ. ಕೊರೊನಾ ಸೋಂಕಿನ ಮೇಲೆ ಕೋವಿಶೀಲ್ಡ್ ಲಸಿಕೆ ಪ್ರಭಾವದ ಕುರಿತು ಹಲವು ಅಧ್ಯಯನಗಳು ನಡೆದಿದ್ದು, ಈ ಲಸಿಕೆಯು ಸೋಂಕಿನ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ಸಹಕಾರಿ ಎಂಬುದನ್ನು ಸಾಬೀತುಪಡಿಸಿವೆ.


Share this Story:

Follow Webdunia kannada

ಮುಂದಿನ ಸುದ್ದಿ

ಗೂಗಲ್ - ವಾಟ್ಸಾಪ್ ಗೆ ರಷ್ಯಾದಿಂದ ಭಾರೀ ದಂಡ