ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೇತರ ಪಕ್ಷಗಳು ಕಾಂಗ್ರೆಸ್ ನೇತೃತ್ವದಲ್ಲಿ ಮಹಾಘಟಬಂಧನ್ ಗೆ ಸಿದ್ಧವಾಗಿದೆ.
ಹೀಗಿರುವಾಗ ರಾಹುಲ್ ಗಾಂಧಿ ಪ್ರಧಾನಿಯಾಗುವುದನ್ನು ಇತರ ಪಕ್ಷಗಳು ಒಪ್ಪುವುದೇ? ನಿಮ್ಮ ಅಭಿಪ್ರಾಯವೇನು ಎಂದು ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ಗೆ ಪ್ರಶ್ನೆ ಕೇಳಿದಾಗ ಅವರು ಎಚ್ಚರಿಕೆಯಿಂದಲೇ ಉತ್ತರಿಸಿದ್ದಾರೆ.
‘ಮೊದಲು ಚುನಾವಣೆ ಒಟ್ಟಾಗಿ ಎದುರಿಸೋಣ. ಪ್ರಧಾನಿ ಯಾರಾಗಬೇಕೆಂದು ನಂತರ ತೀರ್ಮಾನಿಸೋಣ. ಯಾವ ಪಕ್ಷಕ್ಕೆ ಹೆಚ್ಚು ಸ್ಥಾನ ಸಿಗುತ್ತದೋ ಅದುವೇ ಪ್ರಧಾನಿ ಅಭ್ಯರ್ಥಿಗೆ ಬೇಡಿಕೆ ಇಡಬಹುದು. ಮೊದಲು ಸಂವಿಧಾನ ಉಳಿಸುವುದರತ್ತ ಗಮನಹರಿಸೋಣ’ ಎಂದು ಜಾಣತನದಿಂದಲೇ ಉತ್ತರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.