ಮಧ್ಯಪ್ರದೇಶ : ಇತ್ತೀಚೆಗಷ್ಟೇ ಯುವತಿಯರು ಬಾಯ್ ಫ್ರೆಂಡ್ ಗಳನ್ನು ಹೊಂದಬಾರದೆಂದು ಹೇಳಿದ್ದ ಮಧ್ಯ ಪ್ರದೇಶದ ಬಿಜೆಪಿ ಶಾಸಕ ಪನ್ನಾಲಾಲ್ ಶಕ್ಯ ಅವರು ಇದೀಗ ಮತ್ತೊಂದು ಹೇಳಿಕೆಯೊಂದರ ಮೂಲಕ ರಾಹುಲ್ ಗಾಂಧಿ ಅವರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.
ಗುನಾದಲ್ಲಿ ಸಾರ್ವಜನಿಕ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡಿದ ಅವರು,’ ಕಾಂಗ್ರೆಸ್ ಪಕ್ಷ ಗರೀಬೀ ಹಠಾವೋ ಘೋಷಣೆ ಮೊಳಗಿಸಿದರೂ ಬಡವರನ್ನು ನಿರ್ಮೂಲಗೊಳಿಸಿದೆ. ಇಂತಹ ನಾಯಕರಿಗೆ ಜನ್ಮ ನೀಡುವ ಮಹಿಳೆಯರಿದ್ದಾರೆ. ಸಂಸ್ಕಾರವಿಲ್ಲದವರಂತೆ ವರ್ತಿಸಿ ಸಮಾಜಕ್ಕೆ ತೊಂದರೆ ಸೃಷ್ಟಿಸುವ ಮಕ್ಕಳನ್ನು ಹೊಂದುವ ಬದಲು ಮಹಿಳೆಯರು ಬಂಜೆಯರಾಗಿ ಉಳಿಯುವುದು ಲೇಸು’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ