Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸರ್ಜಿಕಲ್ ಸ್ಟ್ರೈಕ್ ಎಂದರೇನು? - ಪ್ರತಿಯೊಬ್ಬ ಭಾರತೀಯ ಅರಿಯಬೇಕಿದನ್ನು

ಸರ್ಜಿಕಲ್ ಸ್ಟ್ರೈಕ್ ಎಂದರೇನು? - ಪ್ರತಿಯೊಬ್ಬ ಭಾರತೀಯ ಅರಿಯಬೇಕಿದನ್ನು
ನವದೆಹಲಿ , ಗುರುವಾರ, 29 ಸೆಪ್ಟಂಬರ್ 2016 (15:05 IST)
ಇಂದು ಪ್ರತಿಯೊಬ್ಬ ಭಾರತೀಯ ತಮ್ಮ ಸೈನಿಕರ ಬಗ್ಗೆ ಹೆಮ್ಮೆ ಪಟ್ಟುಕೊಳ್ಳಬೇಕಾದ ದಿನ. ಕಳೆದ ರಾತ್ರಿ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಉಗ್ರರ ಕ್ಯಾಂಪ್‌ಗಳನ್ನು ಗುರಿಯಾಗಿರಿಸಿಕೊಂಡು ಸರ್ಜಿಕಲ್ ಸ್ಟ್ರೈಕ್ (ಸೀಮಿತ ದಾಳಿ) ಕೈಗೊಳ್ಳಲಾಗಿದ್ದು ದಾಳಿಯಲ್ಲಿ ಅನೇಕ ಉಗ್ರರು ಸಾವನ್ನಪ್ಪಿದ್ದಾರೆ. ಅವರ ಜತೆಗಿದ್ದ ಹಲವರು ಗಾಯಗೊಂಡಿದ್ದಾರೆ ಎಂದು ಸೇನಾ ಮುಖ್ಯಸ್ಥ ರಣಬೀರ್ ಸಿಂಗ್ ಬಹಿರಂಗ ಪಡಿಸಿದ್ದು ಇದು ದೇಶಾದ್ಯಂತ ಹೊಸ ಸಂಚಲನವನ್ನು ಮೂಡಿಸಿದೆ. 

 
ಹಾಗಾದರೆ ಸರ್ಜಿಕಲ್ ಸ್ಟ್ರೈಕ್ ಎಂದರೇನು? 
 
*ಸರ್ಜಿಕಲ್ ಸ್ಟ್ರೈಕ್ ಎಂದರೆ  ವ್ಯಾಪಕ ಹಾನಿಯನ್ನು ತಪ್ಪಿಸಿ ನಿರ್ದಿಷ್ಟವಾದುದನ್ನು ನಾಶಗೊಳಿಸಲು ವಿನ್ಯಾಸಿಸಲಾದ ಸೇನಾ ದಾಳಿ. 
 
ಒಂದು ನಿರ್ದಿಷ್ಟ ಸ್ಥಳದಲ್ಲಿ, ನಿಖರ ರೀತಿಯಲ್ಲಿ ಮಾಡಲಾದ ಒಂದು ಬಗೆಯ ಮಿಲಿಟರಿ ಆಕ್ರಮಣ. ಈ ಸೀಮಿತ ದಾಳಿಯಲ್ಲಿ ಬೃಹತ್ ಪ್ರಮಾಣದ ಹಾನಿಯನ್ನು ತಪ್ಪಿಸಿ ಉದ್ದೇಶಿತ ಕಾನೂನುಬದ್ಧ ಸೇನಾ ಗುರಿಗೆ ಮಾತ್ರ ಹಾನಿ ಮಾಡುವ ಗುರಿ ಇರುತ್ತದೆ. ಈ ರೀತಿಯ ದಾಳಿಯಲ್ಲಿ ಸುತ್ತಲಿನ ವಾಹನಗಳು, ಕಟ್ಟಡಗಳು, ಅಥವಾ ಸಾಮಾನ್ಯ ಸಾರ್ವಜನಿಕ ಮೂಲಭೂತ ಮತ್ತು ಉಪಯುಕ್ತತೆಗಳಿಗೆ ಯಾವುದೇ ರೀತಿಯ ಹಾನಿಯಾಗದಂತೆ ನೋಡಿಕೊಳ್ಳಲಾಗುತ್ತಿದೆ. 
 
ಈ ಸೀಮಿತ ದಾಳಿಗೆ ಅತ್ಯುತ್ತಮ ಉದಾಹರಣೆ ಎಂದರೆ ಇತ್ತೀಚಿಗೆ ಭಾರತೀಯ ಸೈನ್ಯದ 70 ಕಮಾಂಡೋಗಳು ಮಯನ್ಮಾರ್‌ನಲ್ಲಿ ಕೈಗೊಂಡ ಕಾರ್ಯಾಚರಣೆ. ಇದನ್ನು ಕೇವಲ 40 ನಿಮಿಷಗಳಲ್ಲಿ ಮುಗಿಸಿದ್ದ ಕಮಾಂಡೋಗಳು 38 ನಾಗಾ ಬಂಡುಕೋರರನ್ನು ಹತ್ಯೆಗೈಯ್ಯಲಾಗಿತ್ತು. ಜತೆಗೆ 7 ಜನ ಗಾಯಗೊಂಡಿದ್ದರು. 
 
ನಿಖರ ಬಾಂಬ್ ದಾಳಿ ಕೂಡ ಈ ರೀತಿಯ ಕಾರ್ಯಾಚರಣೆಗೆ ಉತ್ತಮ ಉದಾಹರಣೆ. ಬಾಧಿತ ಪ್ರದೇಶದಲ್ಲಿ ವ್ಯಾಪಕ ಹಾನಿಯನ್ನುಂಟು ಮಾಡುವ ಕಾರ್ಪೆಟ್ ಬಾಂಬಿಂಗ್‌ಗೆ ಹೋಲಿಸಿದರೆ ಅದಕ್ಕೆ ವಿರುದ್ಧವಾದ ದಾಳಿ ಇದು.  
 
2003ರಲ್ಲಿ ಅಮೇರಿಕ ಸೇನೆ ಇರಾಕ್ ಮೇಲೆ ಯುದ್ಧ ಸಾರಿದ್ದು ಕೂಡ ಸೀಮಿತ ದಾಳಿಗೆ ಉತ್ತಮ ಉದಾಹರಣೆ. ಆಗ ಸರ್ಕಾರಿ ಕಟ್ಟಡ, ಇರಾಕ್ ಮಿಲಿಟರಿ ಪಡೆಗಳ ಮೇಲೆ ಅಮೇರಿಕಾ ವ್ಯವಸ್ಥಿತವಾಗಿ ದಾಳಿ ಕೈಗೊಂಡಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ಶಾಂತಿ ಸ್ಥಾಪನೆ ಉದ್ದೇಶ ನಮ್ಮ ದೌರ್ಬಲ್ಯವಲ್ಲ : ನವಾಜ್ ಷರೀಫ್ ಎಚ್ಚರಿಕೆ