Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಶಾಂತಿ ಸ್ಥಾಪನೆ ಉದ್ದೇಶ ನಮ್ಮ ದೌರ್ಬಲ್ಯವಲ್ಲ : ನವಾಜ್ ಷರೀಫ್ ಎಚ್ಚರಿಕೆ

ಶಾಂತಿ ಸ್ಥಾಪನೆ ಉದ್ದೇಶ ನಮ್ಮ ದೌರ್ಬಲ್ಯವಲ್ಲ : ನವಾಜ್ ಷರೀಫ್ ಎಚ್ಚರಿಕೆ
ಇಸ್ಲಾಮಾಬಾದ್ , ಗುರುವಾರ, 29 ಸೆಪ್ಟಂಬರ್ 2016 (15:03 IST)
ಭಾರತೀಯ ಸೇನಾ ಕಾರ್ಯಾಚರಣೆ ಪ್ರಧಾನ ನಿರ್ದೇಶಕ (ಡಿಜಿಎಂಓ) ಜನರಲ್ ರಣಬೀರ್ ಸಿಂಗ್, ಪಾಕ್ ಆಕ್ರಮಿತ ಕಾಶ್ಮಿರದ ಮೇಲೆ ದಾಳಿ ನಡೆಸಿ 38 ಉಗ್ರರನ್ನು ಹತ್ಯೆ ಮಾಡಲಾಗಿದೆ ಎನ್ನುವ ಹೇಳಿಕೆ ಹೊರಬೀಳುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಪಾಕ್ ಪ್ರಧಾನಿ ನವಾಜ್ ಷರೀಫ್, ಭಾರತೀಯ ಸೇನಾ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. 
 
ಗಡಿ ರೇಖೆ ನಿಯಂತ್ರಣದಲ್ಲಿರುವ ಪಾಕ್ ಆಕ್ರಮಿತ ಕಾಶ್ಮಿರದ ಮೇಲೆ ನಡೆದ ಭಾರತೀಯ ಸೇನಾ ದಾಳಿ ಆಕ್ರಮಣಕಾರಿ ಮನೋಭಾವವನ್ನು ತೋರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ನಾವು ಭಾರತೀಯ ಸೇನೆಯ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇವೆ. ನಾವು ಶಾಂತಿ ಬಯಸುತ್ತೇವೆ ಎಂದರೆ ದುರ್ಬಲರು ಎಂದರ್ಥವಲ್ಲ. ದೇಶದ ಸಾರ್ವಭೌಮತೆಯನ್ನು ಕಾಪಾಡಲು ಪಾಕ್ ಸೇನೆ ಸನ್ನದ್ಧವಾಗಿದೆ. ಯಾವುದೇ ದಾಳಿಯನ್ನು ಎದುರಿಸಲು ಸೇನೆ ಸಜ್ಜಾಗಿದೆ ಎಂದು ಗುಡುಗಿದ್ದಾರೆ.
 
ಸರ್ಜಿಕಲ್ ದಾಳಿಯಲ್ಲಿ ಉಗ್ರರೊಂದಿಗೆ ಅವರ ಬೆಂಬಲಿಗರು ಕೂಡಾ ಗಾಯಗೊಂಡಿದ್ದಾರೆ. ಆದರೆ, ಭಾರತೀಯ ಸೇನಾಯೋಧರಲ್ಲಿ ಯಾರೊಬ್ಬರು ಗಾಯಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 
ಸೀಮಿತ ದಾಳಿಯ ಬಗ್ಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಜಮ್ಮು ಕಾಶ್ಮಿರ ರಾಜ್ಯಪಾಲ ನರೀಂದರ್ ನಾಥ್ ವೋಹರಾ ಮತ್ತು ಜಮ್ಮು ಕಾಶ್ಮಿರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರಿಗೆ ಮಾಹಿತಿ ನೀಡಲಾಗಿದೆ ಎಂದು ಡಿಜಿಎಂಓ ರಣಬೀರ್ ಸಿಂಗ್ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ನುಡಿದಂತೆ ನಡೆದ ಪ್ರಧಾನಿ ಮೋದಿ: ಪಾಕ್ ಉಗ್ರರನ್ನು ಹತ್ಯೆಗೈದ ಭಾರತೀಯ ಸೇನೆ