Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೋದಿ ಕನಸಿನ ಯೋಜನೆ ಲೋಕಾರ್ಪಣೆಯ ವಿಶೇಷತೆ ಏನು?

ಮೋದಿ ಕನಸಿನ ಯೋಜನೆ ಲೋಕಾರ್ಪಣೆಯ ವಿಶೇಷತೆ ಏನು?
ಲಕ್ನೋ , ಮಂಗಳವಾರ, 14 ಡಿಸೆಂಬರ್ 2021 (08:28 IST)
ಲಕ್ನೋ : ಹಿಂದೂಗಳ ಪುಣ್ಯಭೂಮಿಯಲ್ಲಿ ಒಂದಾಗಿರುವ ಉತ್ತರ ಪ್ರದೇಶದ ಕಾಶಿ ವಿಶ್ವನಾಥ ಮಂದಿರ ಜೀರ್ಣೋದ್ಧಾರವಾಗಿದೆ.

ಸ್ವಕ್ಷೇತ್ರವೂ ಆಗಿರುವ ವಾರಾಣಸಿಯ ಗಂಗಾತಟದ ಮೇಲಿನ ಕಾಶಿ ವಿಶ್ವನಾಥ ಕಾರಿಡಾರನ್ನು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಿದ್ದಾರೆ.

ಸುಮಾರು 800 ಕೋಟಿ ವೆಚ್ಚದ `ಕಾಶಿ ವಿಶ್ವನಾಥ ಧಾಮ್’ ಯೋಜನೆಗೆ ಮೊದಲ ಹಂತದಲ್ಲಿ ದೇಗುಲ ಪುನಃಶ್ಚೇತನಕ್ಕೆ 339 ಕೋಟಿ ಖರ್ಚಾಗಿದೆ. 2019ರ ಮಾರ್ಚ್ 8 ರಂದು `ದಿವ್ಯ ಕಾಶಿ; ಭವ್ಯ ಕಾಶಿ’ ಹೆಸರಿನ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು.

ಬಳಿಕ ಕಾಲಕಾಲಕ್ಕೆ ಯೋಜನೆ ಸಂಪೂರ್ಣ ಪ್ರಗತಿಯ ಮಾಹಿತಿ ಪಡೆದು, ಖುದ್ದು ಪರಿಶೀಲಿಸ್ತಿದ್ದರು. ಕಿಷ್ಕಿಂದೆಯಂತಿದ್ದ ಕಾಶಿಯಲ್ಲಿ ಗತಕಾಲದ ವೈಭವ ಮರುಕಳಿಸಿದೆ.
ಪಾರಂಪರಿಕತೆಯನ್ನು ಕಾಪಾಡಿಕೊಂಡೇ ವಿಶ್ವನಾಥನ ಸನ್ನಿಧಿಗೆ ಆಧುನಿಕ ಸ್ಪರ್ಶ ನೀಡಲಾಗಿದೆ. ಯೋಜನೆಯ ಎರಡನೇ ಹಂತದಲ್ಲಿ ಗಂಗಾ ನದಿ ತೀರ ಸಮಗ್ರ ಅಭಿವೃದ್ಧಿಯಾಗಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ದಾರುಣ ಘಟನೆ!