Publish Date: Tue, 14 Dec 2021 (08:00 IST)
Updated Date: Tue, 14 Dec 2021 (00:06 IST)
ಬೆಂಗಳೂರು : ಬುದ್ಧಿಮಾಂದ್ಯ ಮಗುವನ್ನು ಹತ್ಯೆಗೈದು ತಂದೆಯೂ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬೆಂಗಳೂರಿನ ಎಸ್.ಆರ್.ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಳಗ್ಗೆ 10 ವರ್ಷದ ಮಗನನ್ನು ಸಂಪ್ಗೆ ಎಸೆದಿದ್ದ ಸುರೇಶ್, ಮಗನನ್ನು ಹತ್ಯೆ ಮಾಡಿದ್ದಾನೆ. ಸಂಜೆ ಶೇಷಾದ್ರಿಪುರಂ ಠಾಣಾ ವ್ಯಾಪ್ತಿಯಲ್ಲಿ ಸುರೇಶ್ ಶವ ಕೂಡ ಪತ್ತೆ ಆಗಿದೆ. ಮಗ ಬುದ್ಧಿಮಾಂದ್ಯ ಎಂಬ ಹಿನ್ನೆಲೆ ಮನೆಯಲ್ಲಿ ಪತ್ನಿ ಜತೆ ಗಲಾಟೆ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.
ಬಳಿಕ ಮುಂಜಾನೆ 5 ಗಂಟೆಗೆ ಮಗುವನ್ನು ಸಂಪ್ಗೆ ಎಸೆದಿದ್ದ. ಸಂಜೆ ಎಸ್.ಆರ್. ನಗರ ಠಾಣೆಗೆ ಶೇಷಾದ್ರಿಪುರಂ ಠಾಣೆಯಿಂದ ಕರೆ ಬಂದಿತ್ತು. ಅಪರಿಚಿತ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕರೆ ಬಂದಿತ್ತು.
ಶೇಷಾದ್ರಿಪುರಂ ಠಾಣಾ ವ್ಯಾಪ್ತಿಯ ರೈಲ್ವೆ ಹಳಿ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದ. ಸುರೇಶ್, ನೇಣುಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದ ಎಂದು ಮಾಹಿತಿ ಲಭ್ಯವಾಗಿದೆ. ಘಟನೆ ಸಂಬಂಧ ಎಸ್.ಆರ್. ನಗರ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.