ಪಿಲಿಭಿತ್ : ಉತ್ತರಪ್ರದೇಶದ ಪಿಲಿಭಿತ್ ಜಿಲ್ಲೆಯಲ್ಲಿ ಡೈರಿ ಮಾಲೀಕನೊಬ್ಬ ತನ್ನ ಮೇಲೆ ಮಾನಭಂಗ ಎಸಗಲು ಯತ್ನಿಸಿದ್ದಾನೆ ಎಂದು 16 ವರ್ಷದ ಹುಡುಗಿಯೊಬ್ಬಳು ಆರೋಪಿಸಿದ್ದಾಳೆ.
ಸಂತ್ರಸ್ತೆ ಹಾಲು ಖರೀದಿಸಲು ಹೋದಾಗ ಆಕೆಯನ್ನು ಗಟ್ಟಿಯಾಗಿ ಹಿಡಿದುಕೊಂಡ ಮಾಲೀಕ ಮಾನಭಂಗಕ್ಕೆ ಯತ್ನಿಸಿದ್ದಾನೆ. ಆ ವೇಳೆ ಆಕೆ ಜೋರಾಗಿ ಕಿರುಚಿಕೊಂಡ ಹಿನ್ನಲೆಯಲ್ಲಿ ಭಯಗೊಂಡ ಆತ ಆಕೆಯನ್ನು ಬಿಟ್ಟು ಯಾರಿಗೆ ಹೇಳದಂತೆ ಬೆದರಿಕೆ ಹಾಕಿದ್ದಾನೆ.
ಆದರೆ ಹುಡುಗಿ ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಆರೋಪಿ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.