ಬೆಂಗಳೂರು : ಬೇಸಿಗೆಯಲ್ಲಿ ಬೆವರುವುದು ಸಾಮಾನ್ಯವಾಗಿದೆ. ಕೆಲವರಿಗೆ ದೇಹದಲ್ಲಿ ಬೆವರು ಹೆಚ್ಚು ಸುರಿದರೆ ಕೆಲವರಿಗೆ ಪಾದಗಳಲ್ಲಿ ಬೆವರು ಸುರಿಯುತ್ತದೆ. ಇದರಿಂದ ಪಾದ ವಾಸನೆ ಬರುತ್ತದೆ. ಈ ವಾಸನೆಯನ್ನು ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ.
ಪಾದಗಳಲ್ಲಿ ಹೆಚ್ಚು ಬೆವರು ಬಂದಾಗ ಶಿಲೀಂಧ್ರ ಸೋಂಕು ಉಂಟಾಗುವ ಕಾರಣದಿಂದ ವಾಸನೆ ಬರುತ್ತದೆ. ಈ ವಾಸನೆಯನ್ನು ನಿವಾರಿಸಲು ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಯುಕ್ತ ವಸ್ತುಗಳನ್ನು ಬಳಸುವ ಬದಲು ಈ ನೈಸರ್ಗಿಕವಾದ ವಸ್ತುಗಳನ್ನು ಬಳಸಿ.
ಅಡುಗೆ ಸೋಡಾವನ್ನು ಪೇಸ್ಟ್ ತಯಾರಿಸಿ ಪಾದಗಳಿಗೆ ಅನ್ವಯಿಸಿ. ಬಳಿಕ 1 ಟಬ್ ನೀರಿಗೆ ½ ಕಪ್ ಹಾಲು, 1 ಚಮಚ ತೆಂಗಿನೆಣ್ಣೆ ಸೇರಿಸಿ ಅದನ್ನು ಪಾದಗಳನ್ನು ನೀರಿನಲ್ಲಿ 15 ನಿಮಿಷ ನೆನಸಿಡಿ. ಬಳಿಕ ಒರೆಸಿಕೊಳ್ಳಿ. ಇದರಿಂದ ಪಾದದ ವಾಸನೆ ನಿವಾರಣೆಯಾಗುತ್ತದೆ.