ಬೆಂಗಳೂರು : ನಾವು ಸೇವಿಸುವ ಆಹಾರ ಕೆಲವೊಮ್ಮೆ ಜೀರ್ಣಾಂಗದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆಗ ಮಲಬದ್ಧತೆ, ಅಜೀರ್ಣ ಸಮಸ್ಯೆ ಕಾಡುತ್ತದೆ. ದೀರ್ಘಕಾಲದವರೆಗೆ ಮಲಬದ್ಧತೆ ಸಮಸ್ಯೆ ಕಾಡಿದರೆ ಅನೇಕ ರೋಗಗಳು ಹುಟ್ಟುತ್ತದೆ. ಹಾಗಾಗಿ ಈ ಮಲಬದ್ಧತೆಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.
ಸಂಶೋಧನೆಯ ಪ್ರಕಾರ ಹರಳೆಣ್ಣೆ ಮಲಬದ್ಧತೆಗೆ ಉತ್ತಮ ಔಷಧವಾಗಿದೆ. ಇದರಲ್ಲಿ ಹಲವು ಬಗೆಯ ಪೋಷಕಾಂಶಗಳಿವೆ. ನೀವು ಮಲಬದ್ಧತೆಯಿಂದ ಬಳಲುತ್ತಿದ್ದರೆ ಅದನ್ನು ನಿವಾರಿಸಲು ಹರಳೆಣ್ಣೆ ತೆಗೆದುಕೊಳ್ಳಿ.
ಪ್ರತಿದಿನ ರಾತ್ರಿ ಮಲಗುವಾಗ 2 ಚಮಚ ಹರಳೆಣ್ಣೆಯನ್ನು 1 ಗ್ಲಾಸ್ ಹಾಲಿಗೆ ಮಿಕ್ಸ್ ಮಾಡಿ ಕುಡಿಯಿರಿ. ಇದರಿಂದ ಜೀರ್ಣಾಂಗ ವ್ಯವಸ್ಥೆ ಬಲಗೊಳ್ಳುತ್ತದೆ. ಹಾಗೂ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.