ಡ್ರಾಪ್ ಕೊಡೋದಾಗಿ ಹೇಳಿದ ಯುವಕರ ಗುಂಪೊಂದು ಯುವತಿಗೆ ಮಾಡಬಾರದ್ದನ್ನು ಮಾಡಿದ್ದಾರೆ.
ಅಪ್ರಾಪ್ತರ ಗುಂಪೊಂದು ಅಪ್ರಾಪ್ತೆ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ನೀಚ ಘಟನೆ ನಡೆದಿದೆ.
ಖೋವಾಯಿ ಜಿಲ್ಲೆಯ ಖಾಸಿಯಮಂಗಲ್ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ.
ಆರೋಪಿಗಳಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿ ತ್ರಿಪುರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಗುಂಪು ಆನ್ಲೈನ್ ಪ್ರತಿಭಟನೆ ಆರಂಭಿಸಿದೆ.
17 ವರ್ಷದ ಬಾಲಕಿಯನ್ನು ಡ್ರಾಪ್ ಕೊಡೊದಾಗಿ ಕಾರಿನಲ್ಲಿ ಹತ್ತಿಸಿಕೊಂಡ ಯುವಕರ ಗುಂಪು ನಿರ್ಜನ ಪ್ರದೇಶಕ್ಕೆ ತೆರಳಿ ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.