ದೆಹಲಿ: ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಮುಖ್ಯಸ್ಥೆ ಪಿಟಿ ಉಷಾ ಅವರು ನನಗೆ ಹೇಳದೆ ಫೋಟೋ ತೆಗೆದು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಮಾಜದ ಮುಂದೆ ನಾನು ಬೆಂಬಲವಾಗಿ ನಿಂತಿದ್ದೇನೆ ಎಂದು ತೋರಿಸಿಕೊಂಡಿದ್ದಾರೆ. ಆದರೆ ನನಗೆ ಅವರಿಂದ ಯಾವ ಬೆಂಬಲ ಕೂಡಾ ಸಿಕ್ಕಿಲ್ಲ ಎಂದು ಕುಸ್ತಿಪಟು ಮತ್ತು ಕಾಂಗ್ರೆಸ್ ನಾಯಕಿ ವಿನೇಶ್ ಫೋಗಟ್ ಬುಧವಾರ ಆರೋಪಿಸಿದ್ದಾರೆ.
2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನನಗೆ ಆದ ಸಮಸ್ಯೆ ಬಳಿಕ ನಾನು ಭಾರತೀಯ ಒಲಿಂಪಿಕ್ ಅಸೋಸಿಯೇಶನ್‌ನಿಂದ ಯಾವುದೇ ನಿಜವಾದ ಬೆಂಬಲವನ್ನು ಪಡೆದಿಲ್ಲ ಎಂದು ಅವರು ಹೇಳಿದರು.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪಿಟಿ ಉಷಾ ಅವರ ವಿರುದ್ಧ ಅಸಮಾಧಾನ ಹೊರಹಾಕಿದ ಫೋಗಟ್ ಅವರು, "ಪಿಟಿ ಉಷಾ ಮೇಡಂ ಅವರು ನಾನು ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಭೇಟಿಗೆ ಬಂದಿದ್ದರು. ಈ ಸಂದರ್ಭದಲ್ಲಿ ನನಗೆ ಗೊತ್ತಿಲ್ಲದೆ ಫೋಟೋ ತೆಗೆದುಕೊಂಡಿದ್ದಾರೆ. ನನಗೆ ಇದರಿಂದ ಯಾವ ಬೆಂಬಲ ಸಿಕ್ಕಿಲ್ಲ ಎಂದರು.
ಒಲಿಂಪಿಕ್ಸ್ ನಲ್ಲಿ ಫೈನಲ್ ಹಂತದಲ್ಲಿ ನಿಯಮಕ್ಕಿಂತ 100 ಗ್ರಾಂ ಅಧಿಕ ತೂಕ ಹೊಂದಿದ್ದಕ್ಕೆ ಫೋಗಟ್ ಅವರನ್ನು ಪ್ಯಾರಿಸ್ ಒಲಿಂಪಿಕ್ಸ್ ಮಹಿಳೆಯರ ಕುಸ್ತಿ ಸ್ಪರ್ಧೆಯ 50 ಕೆ.ಜಿ. ವಿಭಾಗದ ಫೈನಲ್‌ನಿಂದ ಅನರ್ಹಗೊಳಿಸಲಾಗಿತ್ತು. ಇದರಿಂದ ತೀವ್ರ ಆಘಾತಕ್ಕೀಡಾದ ವಿನೇಶ್ ಕುಸ್ತಿಗೆ ವಿದಾಯವನ್ನು ಹೇಳಿ ಕಾಂಗ್ರೆಸ್ ಪಕ್ಷಕ್ಕೆ ಸೇರಿ ಸೇರ್ಪಡೆಯಾಗಿದ್ದಾರೆ.