Publish Date: Thu, 16 Aug 2018 (17:45 IST)
Updated Date: Thu, 16 Aug 2018 (17:50 IST)
ನವದೆಹಲಿ: ಹಿರಿಯ ರಾಜಕಾರಣಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಇನ್ನಿಲ್ಲ. ಇಂದು ಸಂಜೆ 5 ಗಂಟೆ 5 ನಿಮಿಷಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಏಮ್ಸ್ ಆಸ್ಪತ್ರೆ ದೃಢಪಡಿಸಿದೆ.
ಈ ಮೊದಲು ಗೃಹ ಸಚಿವ ರಾಜನಾಥ್ ಸಿಂಗ್ ನಿಧನದ ಬಗ್ಗೆ ಹೇಳಿಕೆ ನೀಡಿ ಗೊಂದಲದ ವಾತಾವರಣ ನಿರ್ಮಿಸಿದ್ದರು. ಆದರೆ ಇದೀಗ ತಾನೇ ಏಮ್ಸ್ ವೈದ್ಯರು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ವಾಜಪೇಯಿ ಕಳೆದ ಕೆಲವು ದಿನಗಳ ಹಿಂದೆಯೇ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ರಾಜಕೀಯ ನಾಯಕರ ದಂಡೇ ವಾಜಪೇಯಿ ಅವರನ್ನು ನೋಡಲು ಹರಿದುಬರುತ್ತಿದೆ. ರಾಜಕೀಯ ರಂಗದಲ್ಲಿ ಅಜಾತ ಶತ್ರು ಎಂದು ಗುರುತಿಸಿಕೊಂಡಿದ್ದ 93 ವರ್ಷ ವಯಸ್ಸಿನ ವಾಜಪೇಯಿ ನಿಧನಕ್ಕೆ ದೇಶವೇ ಕಂಬನಿ ಮಿಡಿಯುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.