ಲಕ್ನೋ: ಮನೆಕೆಲಸಕ್ಕೆಂದು ನೇಮಿಸಲಾಗಿದ್ದ ಮಹಿಳೆ ಚಪಾತಿಗೆ ಹಿಟ್ಟು ಕಲಸುವಾಗ ಮೂತ್ರ ಸೇರಿಸುತ್ತಿದ್ದ ಅಂಶ ಬೆಳಿಗೆ ಬಂದಿದೆ. ಇದು ಬರೋಬ್ಬರಿ 8 ವರ್ಷಗಳ ಬಳಿಕ ಬೆಳಕಿಗೆ ಬಂದಿದೆ.
ಇಂತಹದ್ದೊಂದು ಹೇಸಿಗೆಯ ಘಟನೆ ನಡೆದಿರುವುದು ಉತ್ತರ ಪ್ರದೇಶದ ಗಾಜಿಯಾಬಾದ್ ನಗರದಲ್ಲಿ. ಗಂಡ-ಹೆಂಡತಿ ಇಬ್ಬರೂ ಉದ್ಯೋಗಿಗಳಾಗಿದ್ದರು. ಹೀಗಾಗಿ ಮನೆ ಕೆಲಸಕ್ಕೆಂದು ರೀನಾ ಎಂಬ ಮಹಿಳೆಯನ್ನು ನೇಮಿಸಿಕೊಂಡಿದ್ದರು. 8 ವರ್ಷದಿಂದ ರೀನಾ ಈ ಕುಟುಂಬದ ಜೊತೆ ಕೆಲಸ ಮಾಡುತ್ತಿದ್ದಳು. ಇತ್ತೀಚೆಗೆ ಕುಟುಂಬದವರೆಲ್ಲರಿಗೂ ಒಂದೇ ರೀತಿಯ ಆರೋಗ್ಯ ಸಮಸ್ಯೆಯಾಗುತ್ತಿತ್ತು.
ಕುಟುಂಬ ಸದಸ್ಯರೆಲ್ಲರಿಗೂ ಲಿವರ್ ಸಮಸ್ಯೆಯಾಗಿದ್ದರಿಂದ ವೈದ್ಯರು ಆಹಾರದಲ್ಲೇ ಏನೋ ಸಮಸ್ಯೆಯಾಗುತ್ತಿರಬಹುದು ಎಂದಿದ್ದರು. ಅದರಂತೆ ಅನುಮಾನಗೊಂಡು ಪರಿಶೀಲಿಸಿದಾಗ ಮಹಿಳೆಯ ಅಸಹ್ಯ ಕೆಲಸ ಬೆಳಕಿಗೆ ಬಂದಿದೆ. ಒಂದು ಪಾತ್ರೆಯಲ್ಲಿ ತನ್ನ ಮೂತ್ರವನ್ನು ತುಂಬಿ ಅದಕ್ಕೆ ನೀರು ಸೇರಿಸಿ ಚಪಾತಿ ಹಿಟ್ಟು ಕಲಸುತ್ತಿದ್ದಳು. ಇದನ್ನೇ ಮನೆಯವರಿಗೆ ನೀಡುತ್ತಿದ್ದಳು.
ಇದೇ ಚಪಾತಿಯನ್ನು ಸುದೀರ್ಘ ಕಾಲದಿಂದ ಸೇವಿಸುತ್ತಿದ್ದ ಕುಟುಂಬ ಸದಸ್ಯರು ಅನಾರೋಗ್ಯಕ್ಕೀಡಾಗಿದ್ದಾರೆ. ಇದೀಗ ರೀನಾ ಮೇಲೆ ಮನೆಯವರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಆರೋಪಿ ರೀನಾ ಹೀಗೆ ಮಾಡುತ್ತಿದ್ದುದರ ಕಾರಣ ತಿಳಿದುಬಂದಿಲ್ಲ.