Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಧ್ವನಿವರ್ಧಕಗಳನ್ನು ತೆರವು ಮಾಡಿದ ಉತ್ತರ ಪ್ರದೇಶ!

ಧ್ವನಿವರ್ಧಕಗಳನ್ನು ತೆರವು ಮಾಡಿದ ಉತ್ತರ ಪ್ರದೇಶ!
ಲಕ್ನೋ , ಗುರುವಾರ, 28 ಏಪ್ರಿಲ್ 2022 (10:40 IST)
ಲಕ್ನೋ : ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ಮಾಡುವಂತೆ ಕುರಿತಾಗಿ ದೇಶದಲ್ಲಿ ವಿವಾದ ಎದ್ದಿರುವ ನಡುವೆಯೇ, ರಾಜಕಾರಣಿಗಳೂ ಕೂಡ ಪರ ವಿರೋಧದ ಚರ್ಚೆ ಕೂಡ ಆರಂಭವಾಗಿದೆ.
 
ಈ ನಡುವೆ ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ಬಳಕೆ ಮಾಡುವ ನಿಟ್ಟಿನಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಈಗಾಗಲೇ ಕ್ರಮ ಕೈಗೊಳ್ಳಲು ಆರಂಭಿಸಿದೆ. ಮೂಲಗಳ ಪ್ರಕಾರ ಕಲೆದ 48 ಗಂಟೆಗಳಲ್ಲಿ ಉತ್ತರ ಪ್ರದೇಶದಾದ್ಯಂತ 778 ಧ್ವನಿವರ್ಧಕಗಳನ್ನು ತೆಗೆದುಹಾಕಲಾಗಿದೆ.

ಇದರಲ್ಲಿ 711 ಧ್ಬನಿವರ್ಧಕಗಳನ್ನು ರಾಜಧಾನಿ ಲಕ್ನೋ ಪ್ರದೇಶವೊಂದರಿಂದಲೇ ತೆಗೆದುಹಾಕಲಾಗಿದ್ದರೆ, ರಾಜ್ಯಾದ್ಯಂತ 21 ಸಾವಿರಕ್ಕೂ ಅಧಿಕ ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಗೆ ಅವಕಾಶ ನೀಡಲಾಗಿದ್ದರೂ, ಇದರ ಶಬ್ದದ ಪ್ರಮಾಣವನ್ನು ತೀವ್ರವಾಗಿ ಕಡಿಮೆ ಮಾಡಲಾಗಿದೆ.

ಲಕ್ನೋ ನಂತರ ಆಗ್ರಾ ವಲಯದಿಂದ ಅಂದಾಜು 30 ಧ್ವನಿವರ್ಧಕಗಳನ್ನಯ ತೆಗೆದುಹಾಕಲಾಗಿದ್ದರೆ, ಗೌತಮ ಬುದ್ಧ ನಗರದಿಂದ 19, ಕಾನ್ಪುರ ವಲಯದಲ್ಲಿ 13, ಮೀರತ್ ವಲಯದಿಂದ 2 ಹಾಗೂ ರಾಯ್ ಬರೇಲಿ, ಪ್ರಯಾಗ್ ರಾಜ್ ಹಾಗೂ ವಾರಾಣಾಸಿ ವಲಯದಲ್ಲಿ ತಲಾ ಒಂದು ಧ್ವನಿವರ್ಧಕಗಳನ್ನು ತೆಗೆದುಹಾಕಲಾಗಿದೆ.

ಉಳಿದಂತೆ ರಾಯ್ ಬರೇಲಿ ವಲಯದಿಂದ 5469, ಲಕ್ನೋ ವಲಯದಿಂದ 4803, ಮೀರತ್ ವಲಯದಿಂದ 4711, ಗೋರಖ್ ಪುರ ವಲಯದಿಂದ 2354, ಪ್ರಯಾಗ್ ರಾಜ್ ವಲಯದಿಂದ 1073, ಆಗ್ರಾದಿಂದ 903, ವಾರಾಣಾಸಿಯಿಂದ 887, ಕಾನ್ಪುರ ವಲಯದಿಂದ 359, ಗೌತಮ ಬುದ್ಧ ನಗರದಿಂದ 378, ವಾರಾಣಾಸಿ ಸಿಟಿಯಿಂದ 106 ಹಾಗೂ ಕಾನ್ಪುರ ಸಿಟಿಯಲ್ಲಿ 95 ಧ್ವನಿವರ್ಧಕಗಳಲ್ಲಿ ಶಬ್ದದ ಪ್ರಮಾಣವನ್ನು ತೀವ್ರವಾಗಿ ಕಡಿಮೆ ಮಾಡಲಾಗಿದೆ.

ಇದಲ್ಲದೆ, ಲಕ್ನೋ ಪೊಲೀಸರು ಕೆಲ ಧಾರ್ಮಿಕ ಸ್ಥಳಗಳಿಗೆ ತೆರಳಿ ಅಕ್ರಮವಾಗಿ ಎಷ್ಟು ಧ್ವನಿವರ್ಧಕಗಳನ್ನು ಅಳವಡಿಸಲಾಗಿದೆ ಅದರ ಶಬ್ದದ ಪ್ರಮಾಣ ಎಷ್ಟು ಎನ್ನುವುದನ್ನು ಪರಿಶೀಲನೆ ಮಾಡುತ್ತಿದ್ದಾರೆ. ಇದಲ್ಲದೇ ಧ್ವನಿವರ್ಧಕಕ್ಕೆ ಅವಕಾಶ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಕೂಡ ಪರಿಶೀಲಿಸಲಾಗುತ್ತಿದೆ.

ನಿಯಮ ಉಲ್ಲಂಘಿಸಿದವರಿಗೆ ನೋಟಿಸ್ ನೀಡಲಾಗುತ್ತಿದೆ. ಲಕ್ನೋದ ಕ್ಯಾನ್ಸರ್ಬಾಗ್ನಲ್ಲಿರುವ ಲಕ್ನೋದ ರೋಷನ್ ಅಲಿ ಮಸೀದಿಯಲ್ಲಿ ನಾಲ್ಕು ಧ್ವನಿವರ್ಧಕಗಳನ್ನು ಅಳವಡಿಸಲಾಗಿದ್ದು, ಪೊಲೀಸರ ಸೂಚನೆಯ ನಂತರ 3 ಅನ್ನು ತೆಗೆದುಹಾಕಲಾಗಿದೆ ಮತ್ತು ನಾಲ್ಕನೇ ಧ್ವನಿವರ್ಧಕದ ಧ್ವನಿಯನ್ನು ಕಡಿಮೆ ಮಾಡಲಾಗಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಅನಗತ್ಯ ಕಠಿಣ ನಿರ್ಬಂಧ ಇಲ್ಲ : ಸಿಎಂ