ಲಕ್ನೋ: ಉತ್ತರ ಪ್ರದೇಶದ ಪ್ರವಾಸೋದ್ಯಮ ಇಲಾಖೆ ಬಿಡುಗಡೆಗೊಳಿಸಿದ ರಾಜ್ಯದ ಪ್ರಮುಖ ಪ್ರವಾಸೀ ತಾಣಗಳ ಕೈಪಿಡಿಯಿಂದ ತಾಜ್ ಮಹಲ್ ಹೆಸರನ್ನು ಬೇಕೆಂದೇ ಕೈ ಬಿಡಲಾಗಿತ್ತು ಎಂದು ಸಿಎಂ ಯೋಗಿ ಸಂಪುಟದ ಸಚಿವರೇ ಹೇಳಿಕೆ ನೀಡಿದ್ದಾರೆ.
ತಾಜ್ ಮಹಲ್ ನ್ನು ಕೈಬಿಟ್ಟಿದ್ದಕ್ಕೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷಗಳು ಉತ್ತರ ಪ್ರದೇಶದ ಬಿಜೆಪಿ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ನಂತರ ಇದೊಂದು ಕಣ್ತಪ್ಪಿನಿಂದಾದ ಪ್ರಮಾದ ಎಂದು ಸಿಎಂ ಯೋಗಿ ಪ್ರಕರಣಕ್ಕೆ ತೆರೆ ಎಳೆಯಲು ಯತ್ನಿಸಿದ್ದರು.
ಆದರೆ ಇದೀಗ ಅವರದೇ ಸಚಿವ ಸಂಪುಟದ ಸಚಿವ ಲಕ್ಷ್ಮೀ ನಾರಾಯಣ ಚೌಧರಿ ತಾಜ್ ನಮ್ಮದು ‘ಧರ್ಮ ನೀತಿ’ಯ ಆಧಾರದಲ್ಲಿ ನಡೆಯುತ್ತಿರುವವ ‘ರಾಷ್ಟ್ರವಾದಿ’ ಸರ್ಕಾರವಾದ್ದರಿಂದ ತಾಜ್ ಮಹಲ್ ನ್ನು ಪಟ್ಟಿಯಿಂದ ಕೈಬಿಡಲಾಗಿತ್ತು ಎಂದಿದ್ದಾರೆ. ಈ ಮೂಲಕ ಸಿಎಂ ಯೋಗಿ ಸರ್ಕಾರಕ್ಕೆ ಮುಜುಗರ ತಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ