ಶದ ಮಹತ್ವದ ಸ್ಮಾರಕವಾದ ತಾಜ್ ಮಹಲ್‌ನ್ನು ಪ್ರವಾಸೋದ್ಯಮ ಯೋಜನೆಗಳ ಪಟ್ಟಿಯಲ್ಲಿ ಸ್ಥಾನ ನೀಡದಿರುವ ಉತ್ತರ ಪ್ರದೇಶ ಸರಕಾರ ವಿರುದ್ಧ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದು, ಪ್ರಕಾಶಮಾನವಾದ ಆಗ್ರಾ ಪಟ್ಟಣವನ್ನು ಕತ್ತಲೆಗೆ ತಳ್ಳಿದ ಸಿಎಂ ಯೋಗಿ ಆದಿತ್ಯನಾಥ್ ಅನುಪಯುಕ್ತ ಆಡಳಿತಗಾರ ಎಂದು ಕಿಡಿಕಾರಿದ್ದಾರೆ.
ವಿಶ್ವದ ಏಳು ಅದ್ಭುತಗಳಲ್ಲಿ' ಒಂದು ಎನ್ನುವ ಖ್ಯಾತಿ ಪಡೆದ ತಾಜ್‌ಮಹಲ್ ಸ್ಮಾರಕವನ್ನು ಈ ಪಟ್ಟಿಯಿಂದ ಬಿಟ್ಟಿರುವುದು ನೋಡಿದಲ್ಲಿ ಸಿಎಂ ಯೋಗಿ ಆದಿತ್ಯನಾಥ ಸರ್ಕಾರ ಕೋಮುವಾದಿ ಸರಕಾರ ಎನ್ನುವುದು ಸಾಬೀತಾಗಿದೆ. ಯೋಗಿ ಕೆಲ ದಿನಗಳ ಹಿಂದೆ ತಾಜ್‌ಮಹಲ್ ಭಾರತದ ಸಂಸ್ಕ್ರತಿ ಬಿಂಬಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದರು ಎಂದು ನೆನಪಿಸಿದ್ದಾರೆ.
ಕಳೆದ ವಾರಾಂತ್ಯದಲ್ಲಿ ಸರಕಾರ ಬಿಡುಗಡೆ ಮಾಡಿದ ಕಿರು ಪುಸ್ತಕ ನೈಮಿಶರಣ್ಯದಲ್ಲಿ ಅಲಹಾಬಾದ್, ಚಿತ್ರಕೂಟ್ ಮತ್ತು ಇತರ ಸ್ಥಳಗಳ ಆತಿಥ್ಯವನ್ನು ಉಲ್ಲೇಖಿಸಲಾಗಿದೆ. ಆದರೆ ಆಗ್ರಾ ಅಥವಾ ತಾಜ್ ಮಹಲ್ ಬಗ್ಗೆ ಉಲ್ಲೇಖಿಸದಿರುವುಗು ಇದೀಗ ವಿವಾದಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೊರತುಪಡಿಸಿ, ಇತರ ವಿರೋಧ ಪಕ್ಷಗಳ ನಾಯಕರು ಕೂಡಾ ತಾಜ್ ಮಹಲ್‌ನನ್ನು ಪ್ರವಾಸೋದ್ಯಮ ಪಟ್ಟಿಯಿಂದ ಹೊರತೆಗೆದ ಲೋಪವನ್ನು ಟೀಕಿಸಿದ್ದಾರೆ.
ವಿಶ್ವದಾದ್ಯಂತ ಪ್ರವಾಸಿಗರು ಮಹಾನ್ ಸ್ಮಾರಕವಾದ ತಾಜ್‌ಮಹಲ್ ವೀಕ್ಷಣೆಗೆ ಆಗಮಿಸುತ್ತಾರೆ. ಇದರಿಂದ ಸರಕಾರದ ಆರ್ಥಿಕತೆ ಹೆಚ್ಚಲು ನೆರವಾಗುತ್ತದೆ. ತಾಜ್‌ಮಹಲ್‌ನ ಇತಿಹಾಸ ಮತ್ತು ತಾಜ್‌ಮಹಲ್ ಸಂರಕ್ಷಣೆಗೆ ಸಂಪೂರ್ಣ ನಿರ್ಲಕ್ಷ್ಯತೆ ತೋರಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಜ್ಞಾನಕ್ಕೆ ಜನತೆ ಲೇವಡಿ ಮಾಡಲಿದ್ದಾರೆ ಎಂದು ಸಿಪಿಎಂ ನಾಯಕಿ ಬೃಂದಾ ಕಾರಟ್ ವಾಗ್ದಾಳಿ ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.