Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಾಮನಿರ್ದೇಶನ ಸ್ಪರ್ಧೆಯಲ್ಲಿ ಟ್ರಂಪ್ ಸೋಲು

ಮಾಜಿ ಅಧ್ಯಕ್ಷ ಟ್ರಂಪ್‌

geetha

ವಾಷಿಂಗ್ಟನ್ , ಸೋಮವಾರ, 4 ಮಾರ್ಚ್ 2024 (19:02 IST)
ವಾಷಿಂಗ್ಟನ್ -ವಾಷಿಂಗ್ಟನ್‌ ಡಿ.ಸಿ.ಯಲ್ಲಿ ನಡೆದ ರಿಪಬ್ಲಿಕನ್‌ ಪಕ್ಷದ ನಾಮನಿರ್ದೇಶನ ಸ್ಪರ್ಧೆಯಲ್ಲಿ ಭಾರತ ಮೂಲದ ಅಮೆರಿಕನ್‌ ಅಭ್ಯರ್ಥಿ ನಿಕ್ಕಿ ಹ್ಯಾಲೆ ಜಯಗಳಿಸಿದರು.ಹ್ಯಾಲೆ 1,274 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್‌ ಅವರನ್ನು ಸೋಲಿಸಿದರು.
 
ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ನಾಮನಿರ್ದೇಶನ ಸ್ಪರ್ಧೆಯಲ್ಲಿ ಅಭ್ಯರ್ಥಿಗಳಾಗಿದ್ದ ಬಾಬ್ಬಿ ಜಿಂದಾಲ್‌ . ಕಮಲಾ ಹ್ಯಾರಿಸ್‌ ಮತ್ತು ವಿವೇಕ್‌ ರಾಮಸ್ವಾಮಿ  ಅವರು ಮೊದಲ ಹಂತದಲ್ಲೇ ಗೆಲುವು ಸಾಧಿಸುವಲ್ಲಿ ವಿಫಲರಾಗಿದ್ದರು.
 
ಮಾಜಿ ಅಧ್ಯಕ್ಷ ಟ್ರಂಪ್‌ 676 ಮತಗಳನ್ನು ಪಡೆದಿದ್ದಾರೆ. ವಾಷಿಂಗ್ಟನ್‌ ಡಿ.ಸಿಯ ರಿಪಬ್ಲಿಕನ್‌ ಪಕ್ಷದ ಎಲ್ಲಾ 19 ಪ್ರತಿನಿಧಿಗಳ ಮತಗಳು ಹ್ಯಾಲೆ ಅವರಿಗೆ ಲಭಿಸಲಿವೆ ಎಂದು ಮೂಲಗಳು ಹೇಳಿವೆ.ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷದ ನಾಮನಿರ್ದೇಶನ ಸ್ಪರ್ಧೆಯಲ್ಲಿ ಪ್ರಾಥಮಿಕ ಹಂತದಲ್ಲಿ ಜಯಗಳಿಸಿರುವ ಮೊದಲ ಮಹಿಳೆ ಎಂಬ ಹಿರಿಮೆಗೂ ಹ್ಯಾಲಿ ಪಾತ್ರರಾಗಿದ್ದಾರೆ.ನಿಕ್ಕಿ ಅವರನ್ನು ಅಮೆರಿಕದ ಇತರ ಪ್ರದೇಶಗಳಲ್ಲಿ ಮತದಾರರು ತಿರಸ್ಕರಿಸಿದ್ದಾರೆ. ವಾಷಿಂಗ್ಟನ್‌ ಡಿ.ಸಿ.ಯ ಫಲಿತಾಂಶ ಮಾತ್ರ ಅವರ ಕೈ ಹಿಡಿದಿದೆ' ಎಂದು ಟ್ರಂಪ್‌ ಅವರ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಲಂಚ ಪಡೆದಿದ್ದು ನಿಜವಾದ್ರೆ ರಾಜಕೀಯ ನಿವೃತ್ತಿಯಾಗ್ತೇನೆ- ಸಿಎಂ ಸಿದ್ದರಾಮಯ್ಯ