Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಟ್ರಂಪ್​​ ಪುತ್ರನ ಎಕ್ಸ್​ ಖಾತೆ ಹ್ಯಾಕ್​​​​

ಟ್ರಂಪ್​​ ಪುತ್ರನ ಎಕ್ಸ್​ ಖಾತೆ ಹ್ಯಾಕ್​​​​
ಅಮೆರಿಕಾ , ಶುಕ್ರವಾರ, 22 ಸೆಪ್ಟಂಬರ್ 2023 (20:29 IST)
ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ಹಿರಿಯ ಪುತ್ರನ ಸಾಮಾಜಿಕ ಜಾಲತಾಣ ಎಕ್ಸ್​ ಖಾತೆಯನ್ನು ಹ್ಯಾಕ್​ ಮಾಡಿ ಕಿಡಿಗೇಡಿಗಳು ಸರಣಿ ಟ್ವೀಟ್​ಗಳನ್ನು ಮಾಡಿದ್ದಾರೆ. ಈ ಪೈಕಿ ನನ್ನ ತಂದೆ ಮೃತಪಟ್ಟಿದ್ದಾರೆ ಎಂಬ ಪೋಸ್ಟ್​ ವೈರಲ್​ ಆಗಿದೆ. ನನ್ನ ತಂದೆಯವರಾದ ಡೊನಾಲ್ಡ್​ ಟ್ರಂಪ್​ರವರು ಮೃತಪಟ್ಟಿದ್ದಾರೆ ಎಂಬ ವಿಚಾರವನ್ನು ತಿಳಿಸಲು ಅತ್ಯಂತ ದುಃಖಕರವಾಗಿದೆ. 2024ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ನಾನು ಸ್ಪರ್ಧಿಸುತ್ತೇನೆ ಎಂದು ಅವರ ಖಾತೆಯಿಂದ ಪೋಸ್ಟ್​ ಮಾಡಲಾಗಿದೆ. ಇದರ ಜೊತೆಗೆ ಕೆಲವು ಅಸಹ್ಯಕರ ಟ್ವೀಟ್​ಗಳನ್ನು ಮಾಡಲಾಗಿದ್ದು, ಖಾತೆ ಹ್ಯಾಕ್​ ಆಗಿದೆ ಎಂಬ ವಿಚಾರ ಬೆಳಕಿಗೆ ಬಂದ ನಂತರ ಪೋಸ್ಟ್​ಗಳನ್ನು ಡಿಲೀಟ್​ ಮಾಡಲಾಗಿದೆ. ಇತ್ತ ಹ್ಯಾಕ್​ ಆಗಿರುವ ಸುದ್ದಿ ವೈರಲ್​ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣ ಎಕ್ಸ್​​ ಖಾತೆ ಭದ್ರತೆಯಲ್ಲಿನ ಲೋಪದೋಷವನ್ನು ಎತ್ತಿ ತೋರಿಸಿದೆ. ಈ ವಿಚಾರವಾಗಿ ಹಲವರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್ ಎನ್ ಡಿಎಗೆ ಸ್ವಾಗತ ಕೋರ್ತೇವೆ-ಅಶ್ವಥ್ ನಾರಾಯಣ