ರಾಯ್ಪುರ್: ಛತ್ತೀಸ್ ಗಢ್ ಸರ್ಕಾರವು ತೃತೀಯ ಲಿಂಗಿಗಳನ್ನುಪೊಲೀಸ್ ಇಲಾಖೆಯಲ್ಲಿ ಆಯ್ಕೆಗೊಳಿಸಲು ಆದೇಶ ನೀಡಿದ್ದು, ಡಿಜಿ ಪವನ್ ದೇವ್ ತೃತೀಯ ಲಿಂಗಿಗಳ ಸೇರ್ಪಡೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ತೃತೀಯ ಲಿಂಗಿಗಳು ಈಗ ಎಲ್ಲಾ ಕಡೆ ತಮ್ಮ ಹಕ್ಕನ್ನು ಪಡೆದುಕೊಳ್ಳುತ್ತಿದ್ದಾರೆ ಎನ್ನುವುದಕ್ಕೆ ಇದು ಒಂದು ಸಾಕ್ಷಿ.
ತೃತೀಯ ಲಿಂಗಿಗಳಾದ ತಮಿಳುನಾಡು ಸಬ್ ಇನ್ಸಪೆಕ್ಟರ್ ಪ್ರೀತಿಕಾ ಯಾಶಿಣಿ ಮತ್ತು ರಾಜಸ್ಥಾನದ ಗಂಗಾ ಕುಮಾರಿ ಅವರ ಹೋರಾಟಕ್ಕೆ ಜಯ ಸಿಕ್ಕಿದೆ. ಛತ್ತೀಸ್ ಗಢ್ ಸರ್ಕಾರವು ತೃತೀಯ ಲಿಂಗದವರನ್ನು ಪೊಲೀಸ್ ಇಲಾಖೆಯಲ್ಲಿ ಆಯ್ಕೆ ಮಾಡಲು ಆದೇಶ ನೀಡಿದ್ದು, ಈ ಪ್ರಕ್ರಿಯೆಯು ಆರಂಭವಾಗಿದೆ.
ಇನ್ನು ಛತ್ತೀಸ್ ಗಢ್ ಪೊಲೀಸ್ ಇಲಾಖೆಯು ನಕ್ಸಲ್ ಪೀಡಿತ ಪ್ರದೇಶದಲ್ಲಿ ಕಾರ್ಯನಿರ್ವಹಿಸಲು 35 ಸಾವಿರ ಕಾನ್ಸಟೇಬಲ್ ಆಯ್ಕೆ ಪ್ರಕ್ರಿಯೆ ನಡೆಸಲಿದ್ದು ಇದರಲ್ಲಿ ತೃತೀಯ ಲಿಂಗದವರನ್ನು ಕೂಡ ಸೇರಿಸಿಕೊಳ್ಳಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ