ಕೊಚ್ಚಿ: ಕಳೆದೆರಡು ದಿನಗಳಿಂದ ಓಖಿ ಚಂಡಮಾರುತದ ಅಬ್ಬರಕ್ಕೆ ಸಿಲುಕಿರುವ ಕೇರಳ ಮತ್ತು ತಮಿಳುನಾಡಿನಲ್ಲಿ ಮೃತರ ಸಂಖ್ಯೆ 12 ಕ್ಕೆ ಏರಿಕೆಯಾಗಿದ್ದು, ಹಲವರು ಮನೆ ಮಠ ಕಳೆದುಕೊಂಡಿದ್ದಾರೆ.
ಕೊಚ್ಚಿ ಬಂದರು ಸೇರಿದಂತೆ ತೀರದ ಪ್ರದೇಶಗಳು ಸಂಪೂರ್ಣ ಹಾನಿಗೀಡಾಗಿದೆ. ಚಂಡಮಾರುತದ ಪರಿಣಾಮ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆಯಾಗುತ್ತಿದ್ದು, ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ.
ಕೇರಳದಲ್ಲಿ ಕೊಲ್ಲಂ ಮತ್ತು ತಿರುವನಂತಪುರಂನಲ್ಲಿ ಹೆಚ್ಚಿನ ಹಾನಿಯಾಗಿರುವ ವರದಿಯಾಗಿದೆ. ಇನ್ನು ತಮಿಳುನಾಡಿನಲ್ಲಿ ಕನ್ಯಾಕುಮಾರಿ ಮತ್ತು ತಿರುನಲ್ ವೇಲಿಯಲ್ಲಿ ಹೆಚ್ಚಿನ ಹಾನಿಯಾಗಿದ್ದು, 1200 ಕ್ಕೂ ಹೆಚ್ಚು ಮಂದಿ ಸಂಕಷ್ಟಕ್ಕೀಡಾಗಿದ್ದಾರೆ.
ಓಖಿ ಚಂಡಮಾರುತದ ಪರಿಣಾಮ ಕಡಲು ಭೋರ್ಗರೆಯುತ್ತಿದ್ದರೂ ಮೀನುಗಾರಿಕೆಗೆ ಹೊರಟ ಮೀನುಗಾರರ ಬೋಟ್ ಅಲೆಗಳ ನಡುವೆ ಸಿಲುಕಿದ ಭೀಕರ ದೃಶ್ಯ ಇಲ್ಲಿದೆ ನೋಡಿ…
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ