ತಪಾಸಣೆಗೆ ಎಂದು ಬಂದಿದ್ದ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ವಿಶುಂಗಢ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪೊಲೀಸ್ ಕಾನ್ಸ್ಟೇಬಲ್ ತನ್ನ ತಂಡದೊಂದಿಗೆ ರೌಡಿ ಶೀಟರ್ಸ್ ತಪಾಸಣೆಗೆಂದು ಗ್ರಾಮಕ್ಕೆ ತೆರಳಿದ್ದರು. ಈ ಸಮಯದಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ಓರ್ವ ರೌಡಿಶೀಟರ್ ಗುಂಡಿನ ದಾಳಿ ನಡೆಸಿದ್ದಾನೆ.ರೌಡಿಶೀಟರ್ ಅಶೋಕ್ ಅಲಿಯಾಸ್ ಮುನ್ನಾ ಹಾಗೂ ಆತನ ಪುತ್ರ ಟಿಂಕುನನ್ನ ಬಂಧಿಸಿದ್ದಾರೆ.