ಸಂತ್ರಸ್ತ ಸಹೋದರಿಯರು ಮನೆಗೆ ಹೋಗಲು ಕೈಲಾಶಹಾರ್ ಪಟ್ಟಣದ ಸೇತುವೆ ಬಳಿ ವಾಹನಕ್ಕಾಗಿ ಕಾಯುತ್ತಿದ್ದ ವೇಳೆ ಅಲ್ಲಿಗೆ ಬಂದ ಆಟೋರಿಕ್ಷಾವನ್ನು ಹತ್ತಿದ್ದಾರೆ. ಆದರೆ ಅದರಲಿದ್ದ ಆಟೋಚಾಲಕ ದಾರಿ ಮಧ್ಯೆ ತನ್ನ ಸ್ನೇಹಿತರಿಬ್ಬರನ್ನು ಹತ್ತಿಸಿಕೊಂಡು ಸಹೋದರಿಯರನ್ನು ಕರೆದುಕೊಂಡು ಹೋಗಿ ಕೂಡಿ ಹಾಕಿ ಎರಡು ದಿನಗಳ ಕಾಲ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ನಂತರ ಅವರನ್ನು ಟೆಲಿಮೂರ ರೈಲು ನಿಲ್ದಾಣದಲ್ಲಿ ಬಳಿ ಬಿಟ್ಟಿದ್ದಾರೆ. ಆಗ ಸಂತ್ರಸ್ತ ಸಹೋದರಿಯರು ಅಲ್ಲಿದ್ದ ಸರ್ಕಾರಿ ರೈಲ್ವೆ ಪೊಲೀಸರ ಸಹಾಯದಿಂದ ತಮ್ಮ ಮನೆ ತಲುಪಿದ್ದಾರೆ.
ಈ ವಿಚಾರವನ್ನು ತಾಯಿಗೆ ತಿಳಿಸಿದ ಸಹೋದರಿಯರು ಆಟೋರಿಕ್ಷಾ ಚಾಲಕನ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಟೋರಿಕ್ಷಾ ಚಾಲಕನನ್ನು ಬಂಧಿಸಿದ್ದು, ಆತನ ಇಬ್ಬರು ಸ್ನೇಹಿತರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.