Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಪ್ರಾಪ್ತಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಧರ್ಮಗುರುವಿಗೆ ಸಂತ್ರಸ್ತೆಯ ತಂದೆ ಮಾಡಿದ್ದೇನು ಗೊತ್ತಾ?

ಅಪ್ರಾಪ್ತಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಧರ್ಮಗುರುವಿಗೆ ಸಂತ್ರಸ್ತೆಯ ತಂದೆ ಮಾಡಿದ್ದೇನು ಗೊತ್ತಾ?
ಕೇಪ್ ಟೌನ್ , ಭಾನುವಾರ, 18 ನವೆಂಬರ್ 2018 (11:52 IST)
ಕೇಪ್ ಟೌನ್ : ಧರ್ಮಗುರುವೊಬ್ಬ ಅಪ್ರಾಪ್ತ ಬಾಲಕಿಯ  ಮೇಲೆ ಅತ್ಯಾಚಾರ ಎಸಗಿದ ಕಾರಣ ಆಕೆಯ ತಂದೆ ಧರ್ಮಗುರುವಿನ ಜನನಾಂಗವನ್ನು ಕತ್ತರಿಸಿ ಹಾಕಿದ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ.


ಜಾನ್ ಎಂಬಾತ ಧರ್ಮಗುರುವಿನ ಜನನಾಂಗವನ್ನು ಕತ್ತರಿಸಿದ ಸಂತ್ರಸ್ತ ಬಾಲಕಿಯ ತಂದೆಯಾಗಿದ್ದು, ಈತ ತನ್ನ ಹೆಂಡತಿ ಹಾಗೂ 9 ವರ್ಷದ ಮಗಳೊಂದಿಗೆ ಆಫ್ರಿಕಾದಲ್ಲಿ ವಾಸವಾಗಿದ್ದನು. ಒಮ್ಮೆ ಅದೇ ಏರಿಯಾದ ಧರ್ಮಗುರು ಒಬ್ಬ ಜಾನ್ ಮಗಳ ಮೇಲೆ ಅತ್ಯಾಚಾರ ಎಸೆಗಿ ಪರಾರಿಯಾಗಿದ್ದಾನೆ. ಈ ಪ್ರಕರಣದ ಬಗ್ಗೆ ಜಾನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ಕೂಡ ಧರ್ಮಗುರುವಿಗೆ ತಕ್ಕಶಾಸ್ತಿ ಮಾಡಬೇಕೆಂದು ತನ್ನ ಗೆಳೆಯನೊಂದಿಗೆ ಸೇರಿ ಆತನನ್ನು ಹುಡುಕುತ್ತಿದ್ದನು.


ಎರಡು ದಿನಗಳ ನಂತರ ಆತ ಜಾನ್ ಕೈಗೆ ಧರ್ಮಗುರು ಸಿಕ್ಕಿ ಹಾಕಿಕೊಂಡಾಗ ಆತನನ್ನು ಹಿಗ್ಗಾಮುಗ್ಗಾ ಥಳಿಸಿದ್ದಲ್ಲದೇ ಆತನ ಜನನಾಂಗವನ್ನು ಕತ್ತರಿಸಿ ಹಾಕಿದ್ದಾನೆ. ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾನೆ. ಆದರೆ ಈ ಘಟನೆಯ ಹಿನ್ನಲೆ ಧರ್ಮಗುರುವನ್ನ ಆಸ್ಪತ್ರೆಗೆ ದಾಖಲಿಸಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ. ಈ ಹಿನ್ನಲೆಯಲ್ಲಿ ಜಾನ್​ ನನ್ನು ಪೊಲೀಸರು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

Share this Story:

Follow Webdunia kannada

ಮುಂದಿನ ಸುದ್ದಿ

ಸಹೋದರಿಯರನ್ನು ಎರಡು ದಿನ ಕೂಡಿ ಹಾಕಿ ಮೂವರು ಕಾಮುಕರಿಂದ ನಿರಂತರ ಅತ್ಯಾಚಾರ