ಕೇಂದ್ರದ ಗೃಹ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಫೋಟೋ ತೆಗೆಸಿಕೊಳ್ಳುವ ಸಲುವಾಗಿ ಅಂಗವಿಕಲರನ್ನು ಮೂರು ಗಂಟೆಗಳ ಕಾಲ ಕಾಯಿಸಿರುವ ಘಟನೆ ವರದಿಯಾಗಿದೆ.
ಅಂಗವಿಕಲರಿಗೆ ವೀಲ್ ಚೇರ್ ವಿತರಿಸುವ ಸಲುವಾಗಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ.
ಸಚಿವರ ನಿರೀಕ್ಷೆಯಲ್ಲಿ ಬಿಸಿಲಿನಿಂದ ಬಳಲಿದ್ದ ಅಂಗವಿಕಲರು ತೆರಳು ಮುಂದಾದಾಗ, ಸಚಿವರ ಭೇಟಿ ಮುಗಿಯುವವರೆಗೆ ನಿರ್ಗಮನ ನಿರಾಕರಿಸಲಾಗಿತ್ತು. ಇದರಿಂದ ಅಂಗವಿಕಲರು ತೊಂದರೆ ಅನುಭವಿಸಿದ್ದು, ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.