ಮುಂಬೈ : ಬಾಲಿವುಡ್ ನ ಖ್ಯಾತ ನಟ ಹೃತಿಕ್ ರೋಷನ್ ಅವರು ಬುಧವಾರ ತಮ್ಮ 44ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಅವರ ಮಾಜಿ ಪತ್ನಿ ಸುಸೇನ ಖಾನ್ ಅವರು ಹೃದಯಪೂರ್ವಕವಾದ ಶುಭಾಶಯ ತಿಳಿಸಿದ್ದಾರೆ.
ಸುಸೇನ ಖಾನ್ ಅವರು ‘ಎಂದಿಗೂ ಎಂದೆಂದಿಗೂ ನನ್ನ ಬಾಳಿನ ಬೆಳಕು’ ಎಂದು ಹೇಳಿ ಮಕ್ಕಳೊಂದಿಗೆ ಫ್ರಾನ್ಸ್ ಪ್ರವಾಸ ಕೈಗೊಂಡಿದ್ದಾಗ ತೆಗೆದ ಫೋಟೋ ಒಂದನ್ನು ಪೋಸ್ಟ್ ಮಾಡಿ ಹೃತಿಕ್ ರೋಷನ್ ಅವರಿಗೆ ಬರ್ತ್ ಡೇ ವಿಶ್ ಮಾಡಿದ್ದಾರೆ. ಸುಮಾರು 14 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿ ,ಎರಡು ಮುದ್ದಾದ ಮಕ್ಕಳನ್ನು ಪಡೆದು ನಂತರ ಇಬ್ಬರು ವಿಚ್ಛೇದನ ಪಡೆದು ಬೇರೆ ಬೇರೆಯಾಗಿದ್ದಾರೆ. ಆದರೂ ಇಬ್ಬರು ಜೊತೆಯಾಗಿ ಸುತ್ತುವುದು, ಬರ್ತ್ ಡೇ ವಿಶ್ ಮಾಡುವುದನ್ನು ಮರೆಯಲ್ಲ.
ಒಂದು ಕಾಲದಲ್ಲಿ ಬಾಲಿವುಡ್ ನ ಕ್ಯೂಟ್ ಕಪಲ್ಸ್ ಎಂದೆನಿಸಿಕೊಂಡ ಈ ಜೋಡಿ ಬೇರೆಯಾದ ನಂತರವು ಒಳ್ಳೆಯ ಬಾಂಧವ್ಯ ಹೊಂದಿರುವುದನ್ನು ಕಂಡು ಅಭಿಮಾನಿಗಳು ಇವರು ಜೊತೆಯಾಗಿ ಯಾಕಿರಬಾರದು ಎಂದು ಪ್ರಶ್ನಿಸುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ