ನವದೆಹಲಿ: ವಿತ್ತ ಸಚಿವ ಅರುಣ್ ಜೇಟ್ಲಿ ಇಂದು 2018-19 ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಈ ಬಗ್ಗೆ ಸಹಜವಾಗಿ ವಿರೋಧ ಪಕ್ಷಗಳು ಪ್ರತಿಕ್ರಿಯೆ ನೀಡುತ್ತವೆ. ಆದರೆ ರಾಹುಲ್ ಗಾಂಧಿ ಏನು ಮಾಡಿದರು ಗೊತ್ತಾ?
ಬಜೆಟ್ ಮಂಡನೆಯಾದ ಬಳಿಕ ಸಂಸತ್ತಿನ ಹೊರಗೆ ತಮ್ಮ ಕಾರಿನತ್ತ ಸಾಗುತ್ತಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಮಾಧ್ಯಮ ಪ್ರತಿನಿಧಿಗಳು ಪ್ರತಿಕ್ರಿಯೆ ನೀಡುವಂತೆ ಒತ್ತಾಯಿಸಿದರು. ಬಜೆಟ್ ಬಗ್ಗೆ ಹೇಳಿ ಎಂದು ಕೇಳುತ್ತಲೇ ಇದ್ದರು.
ಆದರೆ ರಾಹುಲ್ ಗಾಂಧಿ ಮಾತ್ರ ಎಲ್ಲರ ಪ್ರಶ್ನೆಗಳನ್ನು ಸಮಾಧಾನದಿಂದ, ಒಂದು ಕ್ಷಣ ನಿಂತರು. ಆದರೆ ಯಾರಿಗೂ ಪ್ರತಿಕ್ರಿಯೆ ನೀಡಲಿಲ್ಲ. ಸೀದಾ ತಮ್ಮ ಕಾರಿನತ್ತ ಸಾಗಿ ಹೊರಟೇ ಬಿಟ್ಟರು. ಇದೀಗ ಬಿಜೆಪಿ ಇದನ್ನೇ ನೆಪ ಮಾಡಿ ಟ್ರೋಲ್ ಮಾಡುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ