19 ವರ್ಷ ವಯಸ್ಸಿನ ಬಿಎ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ರಂಜನಾ (ಹೆಸರು ಬದಲಿಸಲಾಗಿದೆ) ಎರಡು ವರ್ಷಗಳಿಂದ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಆದರೆ, ಆಕೆಯ ಪೋಷಕರು ಪ್ರೇಮ ವಿವಾಹಕ್ಕೆ ವಿರುದ್ಧವಾಗಿದ್ದರು.
ನಗರಕ್ಕೆ ಹತ್ತಿರವಾಗಿರುವ ಮೋಹನ್‌ಲಾಲ್ ಗಂಜ್ ಪ್ರದೇಶದ ನಿವಾಸಿಯಾಗಿರುವ ಯುವತಿ, ಕುಟುಂಬದ ಒತ್ತಡಕ್ಕೆ ಮಣಿದು ಪ್ರಿಯಕರನಿಂದ ದೂರವಾಗಲು ಸಿದ್ದವಿರಲಿಲ್ಲ. ಪ್ರೀತಿಸಿದವನನ್ನು ಬಿಟ್ಟು ಬೇರೆ ಯಾರು ತನ್ನನ್ನು ವಿವಾಹವಾಗಬಾರದು ಎನ್ನುವ ಕಾರಣಕ್ಕೆ ಬಂಪರ್ ಪ್ಲ್ಯಾನ್ ರೂಪಿಸಿದಳು.
ಭಾನುವಾರ ಬೆಳಿಗ್ಗೆ ರಂಜನಾ ಇದ್ದಕ್ಕಿದ್ದಂತೆ ಕಾಣೆಯಾಗಿದ್ದಾಳೆ. ಆಕೆಯ ಕುಟುಂಬದ ಸದಸ್ಯರು ಪುತ್ರಿಯನ್ನು ದಿನವಿಡೀ ಹುಡುಕುತ್ತಿದ್ದರು ಮತ್ತು ಪುತ್ರಿ ಕಾಣೆಯಾದ ಬಗ್ಗೆ ದೂರು ನೀಡಲು ಪೊಲೀಸರನ್ನು ಸಂಪರ್ಕಿಸಿದರೂ ಪ್ರಯೋಜನವಾಗಿರಲಿಲ್ಲ ಎನ್ನಲಾಗಿದೆ.
ಮಾರನೇ ದಿನ, ಮೈಮೇಲೆ ಹರಿದಿರುವ ಬಟ್ಟೆ ಮತ್ತ ಆಘಾತಗೊಂಡಿರುವಳಂತೆ ಬಂದ ಯುವತಿ, ರವಿವಾರದಂದು ತನ್ನನ್ನು ಮೂವರು ಅಪರಿಚಿತ ವ್ಯಕ್ತಿಗಳು ಅಪಹರಿಸಿ ಗ್ಯಾಂಗ್‌ರೇಪ್ ಎಸಗಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ.
ರವಿವಾರದಂದು ಅಪರಿಚಿತ ವ್ಯಕ್ತಿಯೊಬ್ಬ ನನಗೆ ಕರೆ ಮಾಡಿ ನಿನ್ನ ಸಹೋದರಿಯ ಅಶ್ಲೀಲ ಚಿತ್ರಗಳು ನನ್ನ ಬಳಿಯಿವೆ. ಒಂದು ವೇಳೆ, ನೀನು ಬಂದಲ್ಲಿ ಚಿತ್ರಗಳನ್ನು ಕೊಡುವುದಾಗಿ ಹೇಳಿದ್ದ. ಆತನ ಮಾತನ್ನು ನಂಬಿ ಹೋದಾಗ ಮೂವರು ಅಪರಿಚಿತರು ನನ್ನನ್ನು ಅಪಹರಿಸಿದ್ದರು ಎಂದು ಮಾಹಿತಿ ನೀಡಿದ್ದಳು.
ನಂತರ ನನ್ನನ್ನು ಒತ್ತೆಯಾಳಾಗಿರಿಸಿ ವಾಹನದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಮೂವರು ವ್ಯಕ್ತಿಗಳು ನನ್ನ ಮೇಲೆ ಗ್ಯಾಂಗ್‌ರೇಪ್ ಎಸಗಿ ಮಾರನೇ ದಿನ ನನ್ನನ್ನು ಬಿಡುಗಡೆ ಮಾಡಿದರು ಎಂದು ತಿಳಿಸಿದ್ದಾಳೆ.
ಗ್ಯಾಂಗ್‌ರೇಪ್ ಘಟನೆಯಿಂದ ಆಘಾತಗೊಂಡ ಪೊಲೀಸ್ ಅಧಿಕಾರಿಗಳು, ನಿರ್ಲಕ್ಷ್ಯದ ಆರೋಪದ ಮೇಲೆ ಇಬ್ಬರು ಸ್ಥಳೀಯ ಪೊಲೀಸರನ್ನು ಅಮಾನತ್ತುಗೊಳಿಸಿದರು
ಆದರೆ ಪೊಲೀಸರು ತನಿಖೆ ನಡೆಸಿದಾಗ ಯುವತಿ ರಂಜನಾ ತನ್ನ ಪ್ರೇಮಿಯೊಂದಿಗೆ ರಾತ್ರಿ ಕಳೆದಿರುವುದು ಪತ್ತೆಯಾಗಿತ್ತು.
ಕುಟುಂಬವು ತನ್ನ ಪ್ರೇಮಿಯೊಂದಿಗೆ ವಿವಾಹವಾಗುವುದನ್ನು ವಿರೋಧಿಸುತ್ತಿದೆ. ಆದ್ದರಿಂದ ಗ್ಯಾಂಗ್‌ರೇಪ್ ಕಥೆಯನ್ನು ಕಟ್ಟಿದ್ದೇನೆ. ಗ್ಯಾಂಗ್‌ರೇಪ್ ಆಗಿದೆ ಎಂದಲ್ಲಿ ಯಾರು ವಿವಾಹವಾಗುವುದಿಲ್ಲ. ಕೊನೆಗೆ ಪ್ರೇಮಿಯೊಂದಿಗೆ ವಿವಾಹವಾಗಬೇಕು ಎನ್ನುವ ತಂತ್ರ ಹೆಣೆದಿದ್ದೆ ಎಂದು ಯುವತಿ ಪೊಲೀಸರಿಗೆ ತಿಳಿಸಿದ್ದಾಳೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.