ಬೆಂಗಳೂರು: ಸಂಘ ಪರಿವಾರ ಮತ್ತು ಬಿಜೆಪಿ ಕಾರ್ಯಕರ್ತರ ಹತ್ಯೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಪಿಎಫ್ ಐ ಮತ್ತು ಕೆಎಫ್ ಡಿ ಸಂಘಟನೆಗಳನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ಬಿಜೆಪಿ ನಡೆಸಲುದ್ದೇಸಿರುವ ಮಂಗಳೂರು ಚಲೋ ರ್ಯಾಲಿಗೆ ಸಚಿವ ಯುಟಿ ಖಾದರ್ ಕಿಡಿ ಕಾರಿದ್ದಾರೆ.
‘ಮಂಗಳೂರಿನಲ್ಲಿ ಈಗಾಗಲೇ ಶಾಂತಿ ನೆಲೆಸಿದೆ. ಆದರೆ ಬಿಜೆಪಿಯವರು ಈಗ ವೃಥಾ ರ್ಯಾಲಿ ನಡೆಸಿ ಶಾಂತಿ ಕೆಡಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಮತ್ತಷ್ಟು ಯುವಕರ ಪ್ರಾಣ ತೆಗೆಯಲು ಸಂಚು ನಡೆಸುತ್ತಿದ್ದಾರೆ’ ಎಂದು ವಿಧಾನಸೌಧದಲ್ಲಿ ಖಾದರ್ ವಾಗ್ದಾಳಿ ನಡೆಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಜಾಥಾ, ಪ್ರತಿಭಟನೆ ನಡೆಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಅದಕ್ಕೆ ಒಂದು ಉದ್ದೇಶವಿರಬೇಕು. ಮಂಗಳೂರು ಚಲೋ ಜಾಥಾದ ಉದ್ದೇಶವೇನು ಎಂದು ಖಾದರ್ ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ.