ನವದೆಹಲಿ: ತಾಜ್ ಮಹಲ್ ಬಗ್ಗೆ ಸೃಷ್ಟಿಯಾಗಿರುವ ವಿವಾದಕ್ಕೆ ಕೊನೆಯಾಗುವ ಲಕ್ಷಣ ಕಾಣುತ್ತಿಲ್ಲ. ಈಗ ಮತ್ತೊಬ್ಬ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ತಾಜ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಜೈಪುರ ರಾಜರಿಂದ ಭೂಮಿ ಕದ್ದು ಶಹಜಹಾನ್ ತಾಜ್ ಮಹಲ್ ಕಟ್ಟಿಸಿದ್ದಾರೆ ಎಂದು ಹೇಳಿದ್ದಾರೆ.
ತಾಜ್ ಮಹಲ್ ಇರುವ ಸ್ಥಳ ಜೈಪುರ ರಾಜ-ಮಹಾರಾಜರಿಗೆ ಸೇರಿದ್ದು. ಶಹಜಹಾನ್ ಜೈಪುರದ ರಾಜರಿಗೆ ಸ್ಥಳ ಮಾರಾಟ ಮಾಡುವಂತೆ ಒತ್ತಡ ಹೇರಿದ್ದ. ಇದಕ್ಕೆ ಪರಿಹಾರ ರೂಪವಾಗಿ 40 ಗ್ರಾಮಗಳನ್ನು ಶಹಜಹಾನ್ ನೀಡಿದ್ದ. ಆದರೆ ತಾಜ್ ಮಹಲ್ ಇರುವ ಸ್ಥಳದ ಮೌಲ್ಯಕ್ಕೆ ಹೋಲಿಸಿದರೆ ನೀಡಿರುವ ಪರಿಹಾರ ಏನೇನೂ ಅಲ್ಲ. ಈ ಬಗ್ಗೆ ತಮ್ಮ ಬಳಿ ಸಾಕ್ಷ್ಯಗಳಿವೆ ಎಂದು ಹೇಳಿದ್ದಾರೆ. ಶೀಘ್ರದಲ್ಲೇ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದರು.
ದಾಖಲೆಗಳಲ್ಲಿ ತಾಜ್‌ಮಹಲ್ ಇರುವ ಜಾಗ ದೇವಾಲಯಕ್ಕೆ ಸೇರಿದ್ದು ಎಂದು ದಾಖಲೆಗಳು ಹೇಳುತ್ತಿವೆ. ಆದರೆ ಆ ಸ್ಥಳದಲ್ಲಿದ್ದ ದೇವಸ್ಥಾನ ಧ್ವಂಸಗೊಳಿಸಿ ತಾಜ್ ಕಟ್ಟಲಾಗಿದೆ ಎಂದು ಹೇಳಿದ್ದಾರೆ.