Publish Date: Thu, 19 Oct 2017 (08:42 IST)
Updated Date: Thu, 19 Oct 2017 (08:44 IST)
ನವದೆಹಲಿ: ತಾಜ್ ಮಹಲ್ ಸುತ್ತ ಬಿಜೆಪಿ ನಾಯಕರ ವಿವಾದಾತ್ಮಕ ಹೇಳಿಕೆಗಳು ಇನ್ನೂ ಮುಂದುವರಿದಿದೆ. ಇದೀಗ ಮತ್ತೊಬ್ಬ ಬಿಜೆಪಿ ನಾಯಕ ತಾಜ್ ಮಹಲ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಸಂಸದ ವಿನಯ್ ಕಟಿಯಾರ್ ‘ತಾಜ್ ಮಹಲ್ ನ ನಿಜವಾದ ಹೆಸರು ತೇಜೋ ಮಹಲ್. ಇಲ್ಲಿ ಶಿವಲಿಂಗವಿತ್ತು. ಆದರೆ ಸ್ಮಾರಕ ಕಟ್ಟುವಾಗ ಅದನ್ನು ಕಿತ್ತೊಗೆಯಲಾಯಿತು’ ಎಂದಿದ್ದಾರೆ.
ತಾಜ್ ಮಹಲ್ ಸುತ್ತ ಇಂತಹ ಹಲವು ಊಹಾಪೋಹಗಳು ಮೊದಲಿನಿಂದಲೂ ಇವೆಯಾದರೂ ಬಿಜೆಪಿ ನಾಯಕನ ಈ ಹೇಳಿಕೆ ವಿವಾದಕ್ಕೆ ತುಪ್ಪು ಸುರಿದಂತಾಗಿದೆ. ಈ ಮೊದಲು ಉತ್ತರ ಪ್ರದೇಶ ಸರ್ಕಾರ ಪ್ರವಾಸೋದ್ಯಮ ಇಲಾಖೆಯ ಕೈಪಿಡಿಯಿಂದ ತಾಜ್ ಮಹಲ್ ನ್ನು ಕೈಬಿಟ್ಟಿತ್ತು. ಮತ್ತೊಬ್ಬ ಬಿಜೆಪಿ ನಾಯಕ ಇದು ದ್ರೋಹಿಗಳು ಕಟ್ಟಿದ ಸೌಧ ಎಂದು ಜರೆದಿದ್ದರು. ಇದೀಗ ಇನ್ನೊಬ್ಬ ನಾಯಕನ ಸರದಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ