Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಯೋಧ್ಯೆಯಲ್ಲಿ ಶ‍್ರೀರಾಮ ಮೂರ್ತಿ ಸ್ಥಾಪನೆ…!

ಅಯೋಧ್ಯೆಯಲ್ಲಿ ಶ‍್ರೀರಾಮ ಮೂರ್ತಿ ಸ್ಥಾಪನೆ…!
ಉತ್ತರ ಪ್ರದೇಶ , ಮಂಗಳವಾರ, 10 ಅಕ್ಟೋಬರ್ 2017 (12:30 IST)
ಉತ್ತರ ಪ್ರದೇಶ: ಅಯೋಧ್ಯೆಯ ಸರಯೂ ನದಿ ತೀರದಲ್ಲಿ ನೂರು ಮೀಟರ್‌ ಎತ್ತರದ ಶ್ರೀರಾಮ ದೇವರಮೂರ್ತಿ ಸ್ಥಾಪಿಸಲು  ಉತ್ತರ ಪ್ರದೇಶ ಸರ್ಕಾರ ಚಿಂತನೆ ನಡೆಸಿದೆ.

ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಲು ಸಿಎಂ ಯೋಗಿ ಆದಿತ್ಯನಾಥ್‌ ಸರ್ಕಾರ ನಿರ್ಧಾರ ಮಾಡಿರುವ ಬಗ್ಗೆ ರಾಜಭವನವು ಹೊರಡಿಸಿರುವ ಪ್ರಕಟಣೆಯನ್ನು ವರದಿಗಳು ಉಲ್ಲೇಖಿಸಿವೆ. ಯುಪಿ ರಾಜ್ಯಪಾಲ ರಾಮ ನಾಯಕ್‌ ಗೆ ರಾಜ್ಯ ಪ್ರವಾಸೋದ್ಯಮ ಇಲಾಖೆ ಪ್ರಸ್ತಾವನೆ ಇಟ್ಟಿದೆ. ರಾಜ್ಯದಲ್ಲಿ ಧಾರ್ಮಿಕ ಪ್ರವಾಸೋದ್ಯಮ ಪ್ರೋತ್ಸಾಹಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಹೇಳಿದೆ.

ಯುಪಿ ಪ್ರವಾಸೋದ್ಯಮ ಸಚಿವಾಲಯ ಇತ್ತೀಚೆಗೆ ಬಿಡುಗಡೆ ಮಾಡಿದ್ದ ಟೂರಿಸಂ ಬುಕ್‌ಲೆಟ್‌ನಲ್ಲಿ ಆಗ್ರಾದ ತಾಜ್‌ ಮಹಲ್ ನ್ನು ಕೈಬಿಟ್ಟು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಈಗ ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಸ್ಥಾಪಿಸುವ ಸರ್ಕಾರ ತೀರ್ಮಾನ ತೆಗೆದುಕೊಂಡಿದ್ದು, ಹೊಸ ವಿವಾದ ಸೃಷ್ಟಿಯಾಗುವ ಸಾಧ್ಯತೆಗಳಿವೆ ಎಂದು ಮಾಧ್ಯಮ ವರದಿ ಮಾಡಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೈಕಮಾಂಡ್ ಪ್ರಿಪರೇಟರಿ ಎಕ್ಸಾಂ… `ಕೈ’ ಮುಖಂಡರ ಫೈನಲ್ ಪರೀಕ್ಷೆ ಕಿತ್ತಾಟ