Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮೆವಾತಿ ಟೋಲಾ : ಹೋಳಿ ಆಚರಣೆಯ ವೇಳೆ 60 ವರ್ಷದ ಮಹಿಳೆಯನ್ನು ಐವರು ಯುವಕರು ಹೊಡೆದು ಕೊಂದ ಘಟನೆ ಮೆವತಿ ಟೋಲಾ ಪ್ರದೇಶದಲ್ಲಿ ನಡೆದಿದೆ.
ಮಹಿಳೆ ತಮ್ಮ ಮನೆಯ ಹೊರಗೆ ಹಬ್ಬವನ್ನು ಆಚರಿಸುವುದನ್ನು ಹಾಗೂ ಹೋಳಿ ಸಂಭ್ರಮಿಸುವವರಿಗೆ ವಿರೋಧ ವ್ಯಕ್ತಪಡಿಸಿದ್ದಾಳೆ. ಇದರಿಂದ ಕೋಪಗೊಂಡ ಯುವಕರು ರಾತ್ರಿ ಆಕೆಯ ಮನೆಗೆ ನುಗ್ಗಿ ಕೋಲಿನಿಂದ ಹೊಡೆದು ಕೊಂದಿದ್ದಾರೆ.
ಹಾಗೇ ಇದನ್ನು ತಡೆಯಲು ಬಂದ ಮನೆಯ ಸದಸ್ಯರ ಮೇಲೂ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.