Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬರೇಲಿ : ಮಗಳಿಗೆ ತನ್ನ ಜೊತೆ ಮದುವೆ ಮಾಡಿಸಲು ಒಲ್ಲೆ ಎಂದ ತಂದೆಯನ್ನು 28 ವರ್ಷದ ಯುವಕನೊಬ್ಬ ಹೊಡೆದು ಕೊಂದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಸಂತ್ರಸ್ತನ ಮಗಳು ಮತ್ತು ಆರೋಪಿ ಸಂಬಂಧದಲ್ಲಿದ್ದರು. ಹಾಗಾಗಿ ಮಗಳನ್ನು ತನ್ನ ಜೊತೆ ಮದುವೆ ಮಾಡಿಸುವಂತೆ ಯುವಕ ಆಕೆಯ ತಂದೆಯ ಬಳಿ ಕೇಳಿದ್ದಾನೆ. ಯುವಕ ಕುಡಿದು ಬಂದಿದ್ದರಿಂದ ಈ ಮದುವೆ ಪ್ರಸ್ತಾಪವನ್ನು ತಂದೆ ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ಯುವಕ ಅಲ್ಲಿದ್ದ ಕೋಲಿನಿಂದ ಆತನನ್ನು ಹೊಡೆದು ಕೊಲೆ ಮಾಡಿದ್ದಾನೆ.
ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಆರೋಪಿ ಪರಾರಿಯಾಗಿದ್ದಾನೆ. ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.