Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಪಾಟ್ನಾ: 8 ನೇ ತರಗತಿಯ ಬಾಲಕಿಯ ಮೇಲೆ ಚುಡಾಯಿಸುತ್ತಿದ್ದ ಯುವಕನೊಬ್ಬ ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ 8 ಬಾರಿ ಇರಿದು ಗಂಭೀರ ಗಾಯಗೊಳಿಸಿದ ಘಟನೆ ಬಿಹಾರದಲ್ಲಿ ನಡೆದಿದೆ.
ಕೆಲವು ದಿನಗಳಿಂದ ಬಾಲಕಿಯನ್ನು ಆರೋಪಿ ಹಿಂಬಾಲಿಸುತ್ತಿದ್ದ. ಆತನ ಉದ್ದೇಶ ಫಲಿಸದೇ ಹೋದಾಗ ಬಾಲಕಿಯ ಮೇಲೆ ಹಾಡಹಗಲೇ ಚಾಕುವಿನಿಂದ ಇರಿದಿದ್ದಾನೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಹೀಗಾಗಿ ಪೊಲೀಸರಿಗೆ ಆರೋಪಿಯನ್ನು ಪತ್ತೆ ಮಾಡುವುದು ಸುಲಭವಾಯಿತು. ಕೇವಲ 13 ಸೆಕೆಂಡುಗಳ ಅವಧಿಯಲ್ಲಿ ಆರೋಪಿ ಬಾಲಕಿಗೆ 8 ಬಾರಿ ಇರಿದಿದ್ದಾನೆ. ಸದ್ಯಕ್ಕೆ ಗಾಯಗೊಂಡಿರುವ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.