Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕ್ಷುಲ್ಲುಕ ಕಾರಣಕ್ಕೆ ಪತ್ನಿಯ ಕೊಂದ ಪತಿ

ಕ್ಷುಲ್ಲುಕ ಕಾರಣಕ್ಕೆ ಪತ್ನಿಯ ಕೊಂದ ಪತಿ
ಲಕ್ನೋ , ಗುರುವಾರ, 23 ಡಿಸೆಂಬರ್ 2021 (09:17 IST)
ಲಕ್ನೋ: ಪದೇ ಪದೇ ತವರಿಗೆ ಹೋಗುತ್ತಿದ್ದ ಪತ್ನಿಯ ಖಯಾಲಿಯಿಂದ ಬೇಸತ್ತ ಪತಿ ಆಕೆಯನ್ನು ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ತವರಿಗೆ ಪದೇ ಪದೇ ಹೋಗುತ್ತಿದ್ದ ಪತ್ನಿಯ ಮೇಲೆ ಪತಿ ಸಿಟ್ಟಿಗೆದ್ದಿದ್ದ. ಮತ್ತೆ ತವರಿಗೆ ಹೋಗಲು ಅನುಮತಿ ಕೇಳಿದಾಗಿ ಪತಿ-ಪತ್ನಿ ನಡುವೆ ವಾಗ್ವಾದವಾಗಿತ್ತು.

ಇದೇ ಸಿಟ್ಟಿನ ಭರದಲ್ಲಿ ಪತಿ ಪತ್ನಿಗೆ ಚಾಕುವಿನಿಂದ ಇರಿದಿದ್ದಾನೆ. ಸ್ಥಳೀಯರು ಮಹಿಳೆಯ ಕಿರುಚಾಟ ಕೇಳಿ ಬಾಗಿಲು ತಟ್ಟಿದಾಗ ಪತಿ ಬಾಗಿಲು ತೆಗೆದಿರಲಿಲ್ಲ. ಪತಿ ಕೃತ್ಯ ನಡೆಸಿ ಹೊರನಡೆದ ಬಳಿಕ ನೆರೆಹೊರೆಯವರು ಮನೆಯೊಳಗೆ ಹೋಗಿ ನೋಡಿದಾಗ ಪತ್ನಿ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ತಕ್ಷಣವೇ ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಪೊಲೀಸರು ಆರೋಪಿ ಪತಿಯನ್ನು ಬಂಧಿಸಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಎಸ್ಕೇಪ್ ಆಗಲು ಸೀರೆ ಇಳಿಬಿಟ್ಟ ಪ್ರಿಯಕರ: ಹುಡುಗಿ ಸ್ಥಿತಿ ಗಂಭೀರ