Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತಪ್ಪು ಮಾಡಿದಕ್ಕೆ ಬಾಲಕಿಯ ಗುಪ್ತಾಂಗಕ್ಕೆ ಖಾರದ ಪುಡಿ ಹಾಕಿ ಶಿಕ್ಷೆ ಕೊಟ್ಟ ಆಶ್ರಯ ಸಿಬ್ಬಂದಿ

ತಪ್ಪು ಮಾಡಿದಕ್ಕೆ  ಬಾಲಕಿಯ ಗುಪ್ತಾಂಗಕ್ಕೆ ಖಾರದ ಪುಡಿ ಹಾಕಿ ಶಿಕ್ಷೆ ಕೊಟ್ಟ ಆಶ್ರಯ ಸಿಬ್ಬಂದಿ
ನವದೆಹಲಿ , ಭಾನುವಾರ, 30 ಡಿಸೆಂಬರ್ 2018 (07:19 IST)
ನವದೆಹಲಿ : ತಪ್ಪು ಮಾಡಿದಕ್ಕೆ  ಬಾಲಕಿಯೊಬ್ಬಳ ಗುಪ್ತಾಂಗಕ್ಕೆ ಖಾರದ ಪುಡಿ ಹಾಕಿ ಶಿಕ್ಷೆ ಕೊಟ್ಟ ಅಮಾನವಿಯ ಘಟನೆ ಸರ್ಕಾರೇತರ ಸಂಸ್ಥೆಯೊಂದು(ಎನ್‍ಜಿಓ) ನಡೆಸುವ ಬಾಲಕಿಯರ ಆಶ್ರಯ ನಿವಾಸದಲ್ಲಿ ನಡೆದಿದೆ.

ದೆಹಲಿಯ ಮಹಿಳಾ ಆಯೋಗದ(ಡಿಡಬ್ಲ್ಯೂಸಿ) ಅಧಿಕಾರಿಗಳು ಪರಿಶೀಲನೆ ನಡೆಸಲು ಈ ಆಶ್ರಯಕ್ಕೆ ದಿಢೀರ್ ಭೇಟಿ ನೀಡಿದಾಗ ಅಲ್ಲಿದ್ದ ಬಾಲಕಿಯರು ಆಶ್ರಯದ ಸಿಬ್ಬಂದಿಗಳು ತಮಗೆ ನೀಡುತ್ತಿದ್ದ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದಾರೆ. ಅಷ್ಟೆ ಅಲ್ಲದೆ ಕೆಲವು ದಿನಗಳ ಹಿಂದೆ ಬಾಲಕಿಯೊಬ್ಬಳು ಹೇಳಿದ ಮಾತನ್ನು ಕೇಳಿಲ್ಲ ಅಂತ ಸಿಬ್ಬಂದಿ ಅವಳ ಗುಪ್ತಾಂಗಕ್ಕೆ ಖಾರದ ಪುಡಿ ಹಾಕಿ ಕಿರುಕುಳ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ,

 

ಈ ವಿಷಯ ತಿಳಿಯುತ್ತಿದಂತೆ ಡಿಡಬ್ಲ್ಯೂಸಿ ಅಧಿಕಾರಿಗಳು ಆರೋಪಿಗಳ ಮೇಲೆ ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ದೂರಿನ ಅನ್ವಯ ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡ ಪೊಲೀಸರು, ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

ಮಗಳ ಜೊತೆ ಅಸಭ್ಯವಾಗಿ ವರ್ತಿಸಿದ ಪತಿಗೆ ಪತ್ನಿ ಮಾಡಿದ್ದೇನು ಗೊತ್ತಾ?