ನವದೆಹಲಿ : ನೆಗೆವ್ನ ಬೆನ್-ಗುರಿಯನ್ ವಿಶ್ವವಿದ್ಯಾಲಯದ ನೇತೃತ್ವದ ವಿಜ್ಞಾನಿಗಳ ಗುಂಪು ಮೈಕ್ರೋಫ್ಲೂಯಿಡಿಕ್ ವ್ಯವಸ್ಥೆಯನ್ನು ಬಳಸಿಕೊಂಡು ವೀರ್ಯದ ಕಲ್ಚರ್ ರಚಿಸಲು ನವೀನ ಮೈಕ್ರೋಚಿಪ್ ಅನ್ನು ಸಂಶೋಧಿಸುವಲ್ಲಿ ಯಶಸ್ವಿಯಾಗಿದೆ.
ವಿಜ್ಞಾನಿಗಳ ತಂಡದ ಹೇಳಿಕೆಯ ಪ್ರಕಾರ, ಆಕ್ರಮಣಕಾರಿ ಕಿಮೊಥೆರಪಿ ಪಡೆಯುವ ಕ್ಯಾನ್ಸರ್ ಹೊಂದಿರುವ ಮಕ್ಕಳು ಭವಿಷ್ಯದಲ್ಲಿ ಬಂಜೆತನಕ್ಕೆ ಒಳಗಾಗಬಹುದು ಅಂಥವರಿಗೆ ಇದು ಸಹಾಯವಾಗಲಿದೆ ಎಂದಿದ್ದಾರೆ.
ಟೆಕ್ನಿಯನ್ - ಇಸ್ರೇಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಶೋಧನಾ ಗುಂಪಿನ ಸಹಯೋಗದೊಂದಿಗೆ ವಿಜ್ಞಾನಿಗಳು ಸಿಲಿಕಾನ್ ಚಿಪ್ (ಪಿಡಿಎಂಎಸ್) ಬಳಸಿ ಮೈಕ್ರೋಫ್ಲೂಯಿಡಿಕ್ ಸಿಸ್ಟಮ್ ಮೂಲಕ ಪ್ರಯೋಗಾಲಯದಲ್ಲಿ ವೀರ್ಯವನ್ನು ರಚಿಸುವ ಪ್ರಕ್ರಿಯೆಯನ್ನು ಸುಧಾರಿಸುವ ನವೀನ ವೇದಿಕೆಯನ್ನು ರಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಸಂಶೋಧನೆಯನ್ನು ಇತ್ತೀಚೆಗೆ ಬಯೋಫ್ಯಾಬ್ರಿಕೇಶನ್ನಲ್ಲಿ ಪ್ರಕಟಿಸಲಾಗಿದೆ.