ನವದೆಹಲಿ: ದುಡ್ಡು ಸಂಪಾದನೆಗಾಗಿ ಪತಿ ವೀರ್ಯದಾನ ಮಾಡುತ್ತಿದ್ದ. ಆದರೆ ಇದನ್ನು ತಿಳಿದ ಪತ್ನಿ ಇದೀಗ ವಿಚ್ಛೇದನಕ್ಕೆ ಮುಂದಾಗಿದ್ದಾಳೆ.
ಕಾಲೇಜು ಹಂತದಲ್ಲಿದ್ದಾಗಲೇ ಈ ವ್ಯಕ್ತಿ ವೀರ್ಯದಾನ ಮಾಡಿ ಹಣ ಸಂಪಾದನೆ ಮಾಡುತ್ತಿದ್ದ. ಆದರೆ ಬಳಿಕ ಆ ಖಯಾಲಿ ಬಿಟ್ಟಿದ್ದ. ಮಕ್ಕಳಿಲ್ಲದ ದಂಪತಿಗೆ ಈತ ವೀರ್ಯದಾನ ಮಾಡಿ ಉಪಕಾರ ಮಾಡುತ್ತಿದ್ದ.
ಆದರೆ ಇದೀಗ ಮತ್ತೆ ದುಡ್ಡಿನ ಸಮಸ್ಯೆ ಎದುರಾದ ಕಾರಣಕ್ಕೆ ಹಣ ಗಳಿಕೆಗೆ ವೀರ್ಯದಾನ ಮಾಡುವ ಕೆಲಸಕ್ಕೆ ಮುಂದಾಗಿದ್ದಾನೆ. ಇದನ್ನು ತಿಳಿದು ಮನನೊಂದ ಪತ್ನಿ ವಿಚ್ಛೇದನಕ್ಕೆ ಮುಂದಾಗಿದ್ದಾಳೆ.