ನವದೆಹಲಿ : ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಧ್ಯಕ್ಷತೆ ಕುರಿತು ಸಕ್ರೀಯ ರಾಜಕಾರಣದಿಂದ ದೂರವೇ ಉಳಿದಿರುವ ಅವರ ಅಳಿಯ ಇದೀಗ ರಾಜಕೀಯ ಪ್ರವೇಶಿಸುವ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ಒಳಪಡಿಸಿರುವುದರ ವಿರುದ್ಧ ಕಿಡಿಕಾರಿರುವ ಅವರ ಅಳಿಯ ರಾಬರ್ಟ್ ವಾದ್ರಾ, ಅಗತ್ಯ ಉಂಟಾದರೆ ರಾಜಕೀಯಕ್ಕೆ ಪ್ರವೇಶಿಸುವ ಸುಳಿವು ನೀಡಿದ್ದಾರೆ.
ತನಿಖಾ ಸಂಸ್ಥೆಗಳನ್ನು ಬಿಜೆಪಿ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಈ ಸಂಸ್ಥೆಗಳು ವಿಚಾರಣೆಗೆ ಕರೆಸಿಕೊಂಡ ಒಬ್ಬ ಬಿಜೆಪಿ ನಾಯಕನ ಹೆಸರನ್ನು ಹೇಳಲಿ ನೋಡೋಣ. ಪ್ರತಿ ಬಾರಿಯೂ ತನ್ನ ನೀತಿಗಳ ಬಗ್ಗೆ ದೇಶಕ್ಕೆ ಅಸಮಾಧಾನ ಉಂಟಾಗುತ್ತಿದೆ ಎಂಬ ಭಾವನೆ ಬಿಜೆಪಿಯಲ್ಲಿ ಮೂಡಿದಾಗ, ಗಾಂಧಿ ಕುಟುಂಬಕ್ಕೆ ತೊಂದರೆ ಕೊಡಲು ಆರಂಭಿಸುತ್ತದೆ ಎಂದು ಟೀಕಿಸಿದ್ದಾರೆ.