2007ರಲ್ಲಿ 13 ಸಾವಿರ ಮತ ಪಡೆದು ಮೊದಲ ಭಾರಿಗೆ ಶಾಸಕನಾದೆ. ನಾವು ತಾಯಿಗೆ ಸಮಾನರಾದ ಭಾರತ ಮಾತೆಯನ್ನ ಪೂಜ್ಯಭಾವನೆಯಿಂದ ನೋಡೋದು ಭಾಜಪ ಮಾತ್ರ.
ನೆಲಮಂಗಲ: ನಾನು ಕಾಂಗ್ರೆಸ್‌ಗೆ (Congress) ರಾಜಿನಾಮೆ ಕೊಟ್ಟಾಗ ನನಗೆ ತುಮಕೂರು ಎಂಪಿ ಟಿಕೇಟ್ ಕೊಡುತ್ತೇವೆ ಅಂದರು.
ಆದರೆ ನಾನು ಶಾಸಕನಾದಾಗ ಅನುಭವಿಸಿದ ನೋವು ನನಗೆ ಗೊತ್ತು. ನನ್ನ ಬಗ್ಗೆ ಅಪಪ್ರಾಚಾರ ಮಾಡಿ ಬೀದಿಲಿ ನನ್ನ ಬಟ್ಟೆ ಹರಿದಿದ್ದಾರೆ. ಒಂದೇ ದಿನದಲ್ಲಿ ನನ್ನನ್ನ ಕಳ್ಳನನ್ನಾಗಿ ಮಾಡಿದರು ಎಂದು ನಗರದಲ್ಲಿ ರಾಜ್ಯಸಭಾ ಸದಸ್ಯ ನಟ ಜಗ್ಗೇಶ್ ಹೇಳಿಕೆ ನೀಡಿದರು. ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿಯಲ್ಲಿ ಆಯೋಜಿಸಿದ್ದ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 2007ರಲ್ಲಿ 13 ಸಾವಿರ ಮತ ಪಡೆದು ಮೊದಲ ಭಾರಿಗೆ ಶಾಸಕನಾದೆ. ನಾವು ತಾಯಿಗೆ ಸಮಾನರಾದ ಭಾರತ ಮಾತೆಯನ್ನ ಪೂಜ್ಯಭಾವನೆಯಿಂದ ನೋಡೋದು ಭಾಜಪ. ಹಾಗಾಗಿ ನಾನು ಬಿಜೆಪಿ ಪಕ್ಷ ಸೇರ್ಪಡೆಗೊಂಡೆ. ನಾನು ಮೊದಲ ಭಾರಿ ಪ್ರಮಾಣ ವಚನ ಸ್ವೀಕಾರ ಮಾಡಿದಾಗ ದೇವರ ಮೇಲೆ ಪ್ರಮಾಣ ಮಾಡಿದೆ. ನಾನು ಸಂಘದ ಹಿರಿಯರಿಗೆ ಭಾರಿ ತಲೆ ಬಾಗುತ್ತೇನೆ. ಸದಾನಂದಗೌಡರ ಅಪ್ಪಣೆ ಮೇರೆಗೆ ನಾನು ಯಶವಂತಪುರ ಕ್ಷೇತ್ರದಲ್ಲಿ ಸ್ವರ್ಧಿಸಿದೆ. ಅದಾದ ಮೇಲೆ ಮೂರು ಭಾರಿ ಎಂಎಲ್‌ಸಿಗೆ ಬಂದ ಅವಕಾಶ ಕೈ ತಪ್ಪಿತ್ತು.