ಪುಣೆ: 80 ವರ್ಷದ ವಯೋವೃದ್ಧನೊಬ್ಬ ಮರು ಮದುವೆಯಾಗಲು ಹೊರಟಿದ್ದಕ್ಕೆ ಆಕ್ರೋಶಗೊಂಡ ಪುತ್ರ ಆತನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
47 ವರ್ಷದ ಪುತ್ರ ತಂದೆಯನ್ನು ಕೊಂದ ಆರೋಪಿ. ವೃದ್ಧ ಮರು ಮದುವೆಗಾಗಿ ವೈವಾಹಿಕ ಅಂಕಣದಲ್ಲಿ ಹೆಸರು ನೊಂದಾಯಿಸಿರುವ ವಿಚಾರ ತಿಳಿದ ಮಗ ಆಕ್ರೋಶಗೊಂಡು ಈ ಕೃತ್ಯವೆಸಗಿದ್ದಾನೆ.
ಘಟನೆ ಬಳಿಕ ನೇರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.