Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಶಿಕ್ಷಕಿಯೊಬ್ಬರ ಮನೆಯಿಂದ ಕಳ್ಳತನ ಮಾಡಿದ ಖದೀಮರು ಬಳಿಕ ಗೋಡೆಯ ಮೇಲೆ ಅಶ್ಲೀಲ ಚಿತ್ರ ಬರೆದು ಪರಾರಿಯಾದ ಘಟನೆ ಆನೆಕಲ್ ನಲ್ಲಿ ನಡೆದಿದೆ.
ದೊಮ್ಮಸಂದ್ರದ ಟಿಬಿಐಎಸ್ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಈಕೆ ಶಿಕ್ಷಕರ ಕ್ವಾರ್ಟರ್ಸ್ ನಲ್ಲಿ ವಾಸವಾಗಿದ್ದರು. ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣ, ನಗದು, ಮೊಬೈಲ್ ಕದ್ದೊಯ್ದಿದ್ದಲ್ಲದೆ, ಗೋಡೆ ಮೇಲೆ ಅಶ್ಲೀಲ ಬರಹ ಬರೆದಿದ್ದಾರೆ.
ಶಿಕ್ಷಕಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೋಡಿಕೊಂಡು ಖದೀಮರು ದೋಚಿದ್ದಾರೆ. ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.