Publish Date: Sun, 07 Nov 2021 (12:03 IST)
Updated Date: Sun, 07 Nov 2021 (12:07 IST)
ಹೊಸದಿಲ್ಲಿ: ಬಲವಂತದ ಮದುವೆಗಾಗಿ ದೆಹಲಿ ಮೂಲದ 15 ವರ್ಷದ ಬಾಲಕಿಯನ್ನು ಅಪಹರಣ ಮಾಡಿದ ಸುಖಾಂತ್ಯ ಕಂಡಿದೆ.
ಅಪಹೃತ ಬಾಲಕಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.
ಕಳೆದ ಅಕ್ಟೋಬರ್ 14ರಂದು ದೆಹಲಿ ಮೂಲದ 15 ವರ್ಷದ ಬಾಲಕಿಯನ್ನು, ರಾಜಸ್ಥಾನ ಮೂಲದ ವ್ಯಕ್ತಿಯೋರ್ವನಿಗೆ ಮಾರಾಟ ಮಾಡಲಾಗಿತ್ತು. ರಾಜಸ್ಥಾನ ಮೂಲದ ಗೋಪಾಲ್ ಲಾಲ್ ಎಂಬಾತ ತನ್ನ ಅಳಿಯನೊಂದಿಗೆ ಈ ಬಾಲಕಿಯನ್ನು ಬಲವಂತವಾಗಿ ಮದುವೆ ಮಾಡಿಸಿದ್ದ.
ದೆಹಲಿಯಿಂದ ಬಾಲಕಿಯನ್ನು ಅಪಹರಿಸಿ ಆಕೆಯನ್ನು ಆಗ್ರಾದ ಗುಪ್ತ ಸ್ಥಳವೊಂದರಲ್ಲಿ ಇರಿಸಲಾಗಿತ್ತು. ಅಲ್ಲಿ ಅಕೆಯ ಮೇಲೆ ದೈಹಿಕ ಹಲ್ಲೆ ಮಾಡಲಾಗಿದ್ದು, ಲೈಂಗಿಕವಾಗಿಯೂ ಶೋಷಿಸಲಾಗಿತ್ತು. ಬಾಲಕಿಯನ್ನು ಆಗ್ರಾದಿಂದ ನೇರವಾಗಿ ರಾಜಸ್ಥಾನಕ್ಕೆ ಕರೆದೊಯ್ದ ಪಾಪಿಗಳು, ಅಲ್ಲಿ ಗೋಪಾಲ್ ಲಾಲ್ಗೆ ಆಕೆಯನ್ನು ಕೇವಲ 60,000 ಸಾವಿರ ರೂ.ಗಳಿಗೆ ಮಾರಾಟ ಮಾಡಲಾಗಿತ್ತು.